ಆನ್ಲೈನ್ ಸಾಲ ಪಡೆದುಕೊಂಡ ಮುಲ್ಕಿ ಮೂಲದ ಯುವಕ ನೇಣಿಗೆ ಶರಣು!! ಡೆತ್ ನೋಟ್ ನಲ್ಲಿತ್ತು ಸಾಲಬಾಧೆಯ ವಿವರ

Share the Article

ಆನ್ಲೈನ್ ಸಾಲ ಪಡೆದುಕೊಂಡಿದ್ದ ಯುವಕನೋರ್ವ ಸಾಲ ತೀರಿಸಲು ಆಗದೆ ಮನನೊಂದು ತಾನು ಕೆಲಸ ಮಾಡುತ್ತಿರುವ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕನನ್ನು ಮುಲ್ಕಿ ಸಮೀಪದ ಪಕ್ಷಿಕೆರೆ ನಿವಾಸಿ ಸುಶಾಂತ್(26) ಎಂದು ಗುರುತಿಸಲಾಗಿದ್ದು, ಸಾಲದ ಬಾಧೆಯಿಂದ ಬೇಸತ್ತು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಕಳೆದ ಕೆಲ ದಿನಗಳ ಹಿಂದೆ ಉಡುಪಿಯಲ್ಲಿ ಇಂತಹದೇ ಪ್ರಕರಣವೊಂದರಲ್ಲಿ ಯುವಕನೋರ್ವ ನೇಣುಬಿಗಿದುಕೊಂಡ ಘಟನೆ ಮಾಸುವ ಮುನ್ನವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂತಹ ಪ್ರಕರಣ ಬೆಳಕಿಗೆ ಬಂದಿದೆ.ಮೃತ ಯುವಕನು ಆನ್ಲೈನ್ ನಲ್ಲಿ ಸಾಲ ಪಡೆದುಕೊಂಡವರಿಂದ ಮಾನಸಿಕ ಕಿರಿಕಿರಿ ತಾಳಲಾರದೇ ಆತ್ಮಹತ್ಯೆ ನಡೆಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

Leave A Reply