ಸರ್ಕಾರಿ ನೌಕರರ ಸಂಬಳದಲ್ಲಿ 23 % ಹೆಚ್ಚಳ, ನಿವೃತ್ತಿಯ ವಯಸ್ಸು 62 ಕ್ಕೆ ಏರಿಕೆ!

Share the Article

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು,ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ವೇತನ ಪರಿಷ್ಕರಣೆ ಹಾಗೂ ನಿವೃತ್ತಿ ವಯಸ್ಸಿನ ಕುರಿತು ಘೋಷಣೆ ಮಾಡಿದ್ದಾರೆ.

ಸರ್ಕಾರಿ ನೌಕರರ ವೇತನವನ್ನು ಶೇಕಡ 23.29 ರಷ್ಟು ಏರಿಕೆ ಮಾಡಿದ್ದು,ಆಂಧ್ರಪ್ರದೇಶ ಸರ್ಕಾರ ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಕ್ಕೆ ವಿಸ್ತರಿಸಿದೆ.ಇನ್ನು ಮುಂದೆ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಂಧ್ರಪ್ರದೇಶದಲ್ಲಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಪರಿಗಣಿಸಲಾಗುವುದು ಎಂದು ಸಿಎಂ ಜಗನ್ ತಿಳಿಸಿದ್ದಾರೆ.

ಇದರೊಂದಿಗೆ ಮುಖ್ಯಕಾರ್ಯದರ್ಶಿ ನೇತೃತ್ವದ ಸಮಿತಿ
ಶಿಫಾರಸುಗಳನ್ನು ಮೀರಿ ನೌಕರರ ವೇತನ ಪರಿಷ್ಕರಣೆ
ಮಾಡಲಾಗಿದೆ. ವೇತನ ಪರಿಷ್ಕರಣೆಯಿಂದ ವಾರ್ಷಿಕ 10,247 ಕೋಟಿ ರೂಪಾಯಿ ಹೊರೆಯಾಗಲಿದೆ. 2020 ರ ಏಪ್ರಿಲ್ 1ರಿಂದ ಈ ಸೌಲಭ್ಯ ಜಾರಿಗೆ ಬರುವಂತೆ ಆರ್ಥಿಕ ಸೌಲಭ್ಯ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.

Leave A Reply