Home Interesting ಮಹಿಳಾ ಡಾಕ್ಟರ್ ಗಳಿಬ್ಬರ ಸಲಿಂಗ ಸಂಸಾರ | ಉಂಗುರ ಬದಲಾವಣೆಯ ಮೂಲಕ ಕಿರುಬೆರಳು ಬೆಸೆಯಲು ರೆಡಿ...

ಮಹಿಳಾ ಡಾಕ್ಟರ್ ಗಳಿಬ್ಬರ ಸಲಿಂಗ ಸಂಸಾರ | ಉಂಗುರ ಬದಲಾವಣೆಯ ಮೂಲಕ ಕಿರುಬೆರಳು ಬೆಸೆಯಲು ರೆಡಿ !

Hindu neighbor gifts plot of land

Hindu neighbour gifts land to Muslim journalist

ನಾಗಪುರ್ : ಈಗಿನ ಕಾಲದಲ್ಲಿ ಸಲಿಂಗಿಗಳು ವಿವಾಹವಾಗುವುದು ಸಾಮಾನ್ಯವಾಗಿದೆ. ಈ ಸಾಲಿಗೆ ಈಗ ಇಬ್ಬರು ಮಹಿಳಾ ವೈದ್ಯರು ಕೂಡಾ ಸೇರಿಕೊಂಡಿದ್ದಾರೆ. ಕಳೆದ ವಾರ ನಡೆದ ಇವರಿಬ್ಬರ ನಿಶ್ಚಿತಾರ್ಥ ಸಮಾರಂಭ ತಡವಾಗಿ ಬೆಳಕಿಗೆ ಬಂದಿದೆ. ಈ ಸಲಿಂಗ ಮಹಿಳಾ ವೈದ್ಯರು ಉಂಗುರ ಬದಲಾವಣೆ ಸಮಾರಂಭ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಮಹಿಳಾ ವೈದ್ಯರಾದ ಪರೋಮಿತ ಮುಖರ್ಜಿ ಮತ್ತು ಸುರಭಿ ಮಿಶ್ರಾ ಅವರು ಪರಸ್ಪರ ಮದುವೆಯಾಗುವ ಮನಸ್ಸು ಮಾಡಿಕೊಂಡಿದ್ದಾರೆ.

ಈ ಬಗ್ಗೆ ಪರೋಮಿತ ಮುಖರ್ಜಿ ಮಾತನಾಡುತ್ತಾ , 2013 ರಿಂದಲೂ ನನ್ನ ಲೈಂಗಿಕ ದೃಷ್ಟಿಕೋನದ ಬಗ್ಗೆ ನನ್ನ ತಂದೆಗೆ ಮಾಹಿತಿ ಇತ್ತು. ಇತ್ತೀಚೆಗೆ ನಾನು ನನ್ನ ತಾಯಿಗೂ ತಿಳಿಸಿದೆ. ಇದನ್ನು ತಿಳಿದ ಅವರು ದಿಗ್ಭ್ರಾಂತರಾದರು‌. ನಂತರ ಅವರಿಗೆ ಮನವರಿಕೆ ಮಾಡಿದ ನಂತರ ಈಗ ಒಪ್ಪಿಕೊಂಡಿದ್ದಾರೆ. ಅಂತಿಮವಾಗಿ ಆಕೆ ನಾನು ಖುಷಿಯಾಗಿರುವುದನ್ನು ಬಯಸುತ್ತಾರೆ ಎಂದು ಹೇಳಿದ್ದಾರೆ.

ಇನ್ನು ನಾಗಪುರ ಸುರಭಿ ಮಿತ್ರ ಕೂಡಾ ನನ್ನ ಈ ನಿರ್ಧಾರದ ಬಗ್ಗೆ ನನ್ನ ಕುಟುಂಬದಲ್ಲಿ ಯಾವುದೇ ವಿರೋಧ ಇಲ್ಲ. ನಾನು ಈ ವಿಷಯವನ್ನು ನನ್ನ ಪೋಷಕರಿಗೆ ತಿಳಿಸಿದಾಗ ಅವರು ಸಂತೋಷಪಟ್ಟರು‌. ನಾನು ಮಾನಸಿಕ ತಜ್ಞೆಯಾಗಿದ್ದು, ಭಿನ್ನ ಲಿಂಗಿಯ ಜೊತೆ ಬದುಕು ನಡೆಸಲು ಖುಷಿಯಾಗಿದೆ ಎಂದು ತಿಳಿಸಿದ್ದಾರೆ.