Home News ಮೊದಲ ಬಾರಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ; ಎರಡನೇ ಬಾರಿ ರೈಲ್ವೇ ಹಳಿಯಲ್ಲಿ ಚಿಂದಿಯಾದ ದೇಹ!!

ಮೊದಲ ಬಾರಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ; ಎರಡನೇ ಬಾರಿ ರೈಲ್ವೇ ಹಳಿಯಲ್ಲಿ ಚಿಂದಿಯಾದ ದೇಹ!!

Hindu neighbor gifts plot of land

Hindu neighbour gifts land to Muslim journalist

ಉತ್ತರಕನ್ನಡ: ಬದುಕಿಗಾಗಿ ನೂರೆಂಟು ಹೋರಾಟ ಮಾಡುತ್ತಾರೆ ಜನ. ಒಮ್ಮೆ ಸೋತರೆ ಮತ್ತೆ ಮತ್ತೆ ಪ್ರಯತ್ನಿಸಿ ವಿಜಯಿಯಾಗಲು ಮಾನವ ಪ್ರಯತ್ನ ನಡೆದೇ ಇರುತ್ತದೆ. ಇದಕ್ಕೆ ವಿರುದ್ಧವಾಗಿ, ಸಾಯುವ ಸಲುವಾಗಿ ಕೂಡಾ ಒಮ್ಮೆ ಮಾಡಿದ್ದ ಪ್ರಯತ್ನ ವಿಫಲವಾದರೂ, ಛಲ (?!) ಬಿಡದೇ ಮರಳಿ ಯತ್ನವ ಮಾಡಿದ ಯುವಕನೊಬ್ಬ ತನ್ನ ಎರಡನೇ ಪ್ರಯತ್ನದಲ್ಲಿ ಸಕ್ಸಸ್ ಆದ ಸುದ್ದಿ ಬಂದಿದೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲದ ಲಕ್ಷೇಶ್ವರ ಕೆರೆಕಟ್ಟ ನಿವಾಸಿ ಆದಿತ್ಯಕುಮಾರ ನಾಯ್ಕ (21) ಹೀಗೆ ಮರಳಿ ಯತ್ನವ ಮಾಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಆಟೋಚಾಲಕನಾಗಿದ್ದ ಆತ ಅಂಕೋಲದ ಬಾಳೆಗುಳಿ ಬಳಿ ರೈಲಿಗೆ ತಲೆಯೊಡ್ಡಿ ಆತ್ಮವನ್ನು ಕೊಂದು
ಕೊಂಡಿದ್ದಾನೆ.

ಈತ ಮಾನಸಿಕವಾಗಿ ನೊಂದಿದ್ದು, ಬಹುಶಃ ಪ್ರೇಮವೈಫಲ್ಯಕ್ಕೆ ಒಳಗಾಗಿರಬಹುದು ಎನ್ನಲಾಗಿದೆ. ಈ ಹಿಂದೆಯೂ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಈತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದ. ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.