ಕೋಟ: ರಾತ್ರೋ ರಾತ್ರಿ ಮದುವೆ ಮನೆಗೆ ನುಗ್ಗಿದ ಪೊಲೀಸರಿಂದ ಲಾಠಿಯೇಟು!! ಮದುಮಗನನ್ನು ಠಾಣೆಗೆ ಕರೆತಂದು ಹಿಗ್ಗಾಮುಗ್ಗ ಥಳಿಸಿದ್ದ ಎಸ್.ಐ ಸಸ್ಪೆಂಡ್-ಸಿಬ್ಬಂದಿ ಎತ್ತಂಗಡಿ

Share the Article

ಮೊನ್ನೆಯ ದಿನ ಉಡುಪಿಯ ಕೊಟ್ಟಿತಟ್ಟು ಗ್ರಾಂಪಂ ವ್ಯಾಪ್ತಿಯ ಕೊರಗರ ಕಾಲೋನಿಯೊಂದರಲ್ಲಿ ನಡೆದ ಮೆಹಂದಿ ಕಾರ್ಯಕ್ರದಲ್ಲಿ ಡಿಜೆ ಹಾಕಿದ್ದಾರೆ ಎಂದು ಆರೋಪಿಸಿ ರಾತ್ರೋರಾತ್ರಿ ದಾಳಿ ನಡೆಸಿದ ಪೊಲೀಸರು ಲಾಠಿ ಬೀಸಿದಲ್ಲದೇ, ಮದುಮಗನನ್ನು ಠಾಣೆಗೆ ಕರೆದುಕೊಂಡು ಹೋಗಿ ಬೆತ್ತಲೆ ನಿಲ್ಲಿಸಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಠಾಣೆಯ ಎಸ್.ಐ ಸಂತೋಷ್ ಬಿ.ಸಿ ಅವರನ್ನು ಅಮಾನತುಗೊಳಿಸಿ, ಉಳಿದ ಐವರು ಸಿಬ್ಬಂದಿಗಳನ್ನು ಎತ್ತಂಗಡಿ ಮಾಡಿ ಆದೇಶ ಹೊರಡಿಸಲಾಗಿದೆ.

ಈ ಬಗ್ಗೆ ಇಂದು ಮಾಹಿತಿ ನೀಡಿದ ಉಡುಪಿ ಎಸ್ಪಿ ವಿಷ್ಣುವರ್ಧನ್, ಕೊರಗರ ಮದುವೆಯ ಮೆಹಂದಿ ಕಾರ್ಯಕ್ಕೆ ದಾಳಿ ನಡೆಸಿ, ಡಿಜೆ ಹಾಕಿದ್ದಾರೆ ಎಂದು ಲಾಠಿ ಬೀಸಿದ ಪ್ರಕರಣದ ಆಧಾರದಲ್ಲಿ ಎಸ್.ಐ ತನಿಖೆಯ ಆಧಾರದಲ್ಲಿ ಪಶ್ಚಿಮ ವಲಯ ಐಜಿಪಿ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಹೇಳಿದ್ದಾರೆ.

Leave A Reply