ಮನಸ್ಸಿಗೆ ಬಂದಂತೆ ನಿಂದನಾತ್ಮಕ ಸುದ್ದಿ ಹಾಕುವ ಯೂಟ್ಯೂಬ್ ಗಳ ಮೇಲೆ ಅಂಕುಶ ಬಿಗಿಯಲು ಸಿದ್ಧವಾದ ರಾಜ್ಯ ಸರ್ಕಾರ
ಹೈದರಬಾದ್: ಯೂಟ್ಯೂಬ್ ಗಳಲ್ಲಿ ಅಲ್ಲ-ಸಲ್ಲದ ಮಾಹಿತಿ ಹೆಚ್ಚಾಗಿ ಹೊರಬರುತ್ತಿದ್ದು. ಇತರರನ್ನು ಟೀಕಿಸಿಸುವುದೇ ವಾಹಿನಿಯ ಉದ್ದೇಶ ಎಂಬಂತಾಗಿದೆ.ಅದರಲ್ಲೂ ತೆಲಂಗಾಣದಲ್ಲಿ ಯೂಟ್ಯೂಬ್ ಸುದ್ದಿವಾಹಿನಿಗಳ ಹಾವಳಿ ಹೆಚ್ಚಾಗುತ್ತಿದ್ದು, ಆಕ್ಷೇಪಾರ್ಹ ಪ್ರಸಾರಗಳನ್ನು ಯಾವುದೇ ಅಡೆತಡೆಯಿಲ್ಲದೆ ಪ್ರಸಾರ ಮಾಡುತ್ತಿವೆ.ಇಂತಹ ವಾಹಿನಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸುಳ್ಳು ಮತ್ತು ದ್ವೇಷಪೂರಿತ ಸುದ್ದಿ,ಧರ್ಮ, ಜಾತಿಗಳ ಭಾವನೆಗಳಿಗೆ ಧಕ್ಕೆ ತರುವ ಜತೆಗೆ ಕೆಲವರನ್ನು ಗುರಿಯಾಗಿಸಿಕೊಂಡು ದುರುದ್ದೇಶದಿಂದ ವರ್ತಿಸುವ ವಾಹಿನಿಗಳಿಗೆ ಬೀಳಲಿದೆ ಕಡಿವಾಣ.ಸಿಎಂ ಕೆಸಿಆರ್ ಮೊಮ್ಮಗನ ವಿರುದ್ಧ ಯೂಟ್ಯೂಬ್ ಚಾನೆಲ್ ನಲ್ಲಿ ಆಕ್ಷೇಪಾರ್ಹ ಟೀಕೆಗಳು ಮಾಡಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಸರ್ಕಾರದ ನಿರ್ದೇಶನದಂತೆ ಮಾಹಿತಿ ತಂತ್ರಜ್ಞಾನ (ಐಟಿ) ಇಲಾಖೆ ಕಸರತ್ತು ಆರಂಭಿಸಿದೆ.
ಕೇಂದ್ರ ಸರ್ಕಾರ ಇದೆ ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣಗಳ ಮತ್ತು ಸುದ್ದಿ ವಾಹಿನಿಗಳಿಗಾಗಿ ಮಾಹಿತಿ ತಂತ್ರಜ್ಞಾನ ನಿಯಮಗಳು – 2021 ಯನ್ನು ಜಾರಿಗೆ ತಂದಿತ್ತು. ಅದರಂತೆ ಯೂಟ್ಯೂಬ್ ಮತ್ತು ಇತರ ಆನ್‌ಲೈನ್ ಸುದ್ದಿ ವಾಹಿನಿಗಳಲ್ಲಿ ಸುಳ್ಳು ಮತ್ತು ದ್ವೇಷಪೂರಿತ ಸುದ್ದಿಗಳ ಪ್ರಸಾರ ಮಾಡಿದರೆ ಇದಕ್ಕೆ ಆಯಾ ಚಾನೆಲ್‌ಗಳು ಹೊಣೆಯಾಗಿರುತ್ತವೆ. ಸುದ್ದಿ ಪ್ರಸಾರದ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸುವ ಮತ್ತು ಗರಿಷ್ಠ 15 ದಿನಗಳಲ್ಲಿ ಅವುಗಳನ್ನು ಪರಿಹರಿಸುವ ಜವಾಬ್ದಾರಿ ಆಯ ಯೂಟ್ಯೂಬ್ ಚಾನಲ್ ಗಳದ್ದೆ ಆಗಿರುತ್ತದೆ.
ಐಟಿ ಇಲಾಖೆಯು ಶೀಘ್ರದಲ್ಲೇ ವಾಹಿನಿ ನಿರ್ವಾಹಕರೊಂದಿಗೆ ಸಭೆ ನಡೆಸಿ ಷರತ್ತುಗಳನ್ನು ವಿವರಿಸಲಾಗುವುದು. ನಂತರವೂ ಯೂಟ್ಯೂಬ್ ಚಾನಲ್ ಗಳು ಯಾವುದೇ ನಿಯಮಗಳನ್ನ ಪಾಲಿಸುತ್ತಿಲ್ಲ ಎಂದು ತಿಳಿದರೇ ಅಂಥ ಚಾನಲ್ ಅನ್ನು ಅಮಾನತುಗೊಳಿಸುವಂತೆ ಸರ್ಕಾರದ ಪರವಾಗಿ ಯೂಟ್ಯೂಬ್ ಸಂಸ್ಥೆಗೆ ಪತ್ರ ಬರೆಯಲಾಗುವುದು. ರಾಜ್ಯದ ಎಲ್ಲಾ ಯೂಟ್ಯೂಬ್ ಚಾನೆಲ್‌ಗಳು ಕೇಂದ್ರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಒತ್ತಾಯಿಸಿ ಇಂದು ಯೂಟ್ಯೂಬ್‌ಗೆ ಪತ್ರ ಬರೆಯಲಾಗುವುದು ಎಂದು ಐಟಿ ಇಲಾಖೆ ತಿಳಿಸಿದೆ.
ಸಾರ್ವಜನಿಕರಿಂದ ಆಕ್ಷೇಪಣೆಗಳು ಮತ್ತು ದೂರುಗಳನ್ನು ಸ್ವೀಕರಿಸಲು, ಪ್ರತಿ ಚಾನೆಲ್ ತನ್ನ ಕಚೇರಿ ವಿಳಾಸ, ಪ್ರತಿನಿಧಿ ಹೆಸರು ಮತ್ತು ಬೊಬೈಲ್ ಸಂಖ್ಯೆಯನ್ನು ಪ್ರದರ್ಶಿಸಬೇಕು ಎಂದು ಐಟಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.ಪತ್ರಿಕೋದ್ಯಮದ ಜ್ಞಾನವಿಲ್ಲದವರೂ ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ವಹಿಸುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಗಳು ಮತ್ತು ನಿಯಮಗಳ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇಲ್ಲ ಎಂದು ಐಟಿ ಇಲಾಖೆ ಅಭಿಪ್ರಾಯಪಟ್ಟಿದೆ.