Home ದಕ್ಷಿಣ ಕನ್ನಡ ಕಡಬ: ಜುಗಾರಿ ಅಡ್ಡೆಯ ಮೇಲೆ ದಾಳಿ ನಡೆಸಿದ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ!! ಐವರ ಬಂಧನ-ಎದ್ದೋ...

ಕಡಬ: ಜುಗಾರಿ ಅಡ್ಡೆಯ ಮೇಲೆ ದಾಳಿ ನಡೆಸಿದ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ!! ಐವರ ಬಂಧನ-ಎದ್ದೋ ಬಿದ್ದೋ ಎಂದು ಓಡಿ ತಪ್ಪಿಸಿಕೊಂಡ ಇತರರು

Hindu neighbor gifts plot of land

Hindu neighbour gifts land to Muslim journalist

ಜುಗಾರಿ ಅಡ್ಡೆಯ ಮೇಲೆ ದಾಳಿ ನಡೆಸಿದ ಪ್ರೊಬೆಷನರಿ ಡಿವೈಎಸ್ಪಿ ಧನ್ಯ ನಾಯಕ್ ಹಾಗೂ ನೇತೃತ್ವದ ಪೊಲೀಸರ ತಂಡ, ಆಟದಲ್ಲಿ ನಿರತರಾಗಿದ್ದ ಐವರನ್ನು ಬಂಧಿಸಿದ ಘಟನೆ ಕಡಬ ತಾಲೂಕಿನ ಅಲಂಕಾರಿನಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ರಾಧಾಕೃಷ್ಣ, ತಿಮ್ಮಪ್ಪ ಮುಗೇರ, ರಘುರಾಮ ಹಾಗೂ ಲಕ್ಷ್ಮಣ ಗೌಡ ಎಂದು ಗುರುತಿಸಲಾಗಿದೆ.

ಕಡಬ ಠಾಣಾ ವ್ಯಾಪ್ತಿಯ ಆಲಂಕಾರು ಗ್ರಾಮದ ಕೆದಿಲ ಎಂಬಲ್ಲಿನ ಗೇರು ಅಭಿವೃದ್ಧಿ ನಿಗಮಕ್ಕೆ ಸಂಬಂಧಪಟ್ಟ ಜಾಗದಲ್ಲಿ ಇಸ್ಪೀಟ್ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಖುದ್ದು ಡಿವೈಎಸ್ಪಿ ಅವರೇ ಫೀಲ್ಡ್ ಗೆ ಇಳಿದಿದ್ದರು. ಪೊಲೀಸರ ದಾಳಿಯ ವೇಳೆ ಹಲವರು ತಪ್ಪಿಸಿಕೊಂಡಿದ್ದು, ಐದು ಮಂದಿಯ ಬಂಧನವಾಗಿ ಪ್ರಕರಣ ದಾಖಲಾಗಿದ್ದು, ಉಳಿದವರ ಪತ್ತೆಗೆ ಬಲೆ ಬೀಸಲಾಗಿದೆ.