Home News ತನ್ನ ಪತ್ನಿಗೆ ನಿತ್ಯವೂ ಕರೆ ಮಾಡುತ್ತಿದ್ದ ವ್ಯಕ್ತಿಯನ್ನು ಮುಂದೆಂದೂ ಕರೆ ಮಾಡದ ಹಾಗೆ ಮಾಡಿದ ಪತಿ...

ತನ್ನ ಪತ್ನಿಗೆ ನಿತ್ಯವೂ ಕರೆ ಮಾಡುತ್ತಿದ್ದ ವ್ಯಕ್ತಿಯನ್ನು ಮುಂದೆಂದೂ ಕರೆ ಮಾಡದ ಹಾಗೆ ಮಾಡಿದ ಪತಿ !!

Hindu neighbor gifts plot of land

Hindu neighbour gifts land to Muslim journalist

ಹಾಸನ:ತನ್ನ ಪತ್ನಿಗೆ ನಿತ್ಯವೂ ಕರೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಕೆಯ ಪತಿ ಕರೆಮಾಡುತಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿನಲ್ಲಿ ನಡೆದಿದೆ.

ಮೃತ ರವಿ(42) ಹಳ್ಳಿಮೈಸೂರು ಗ್ರಾಮದ ನಿರ್ವಾಣಿ ಕ್ವಾಟ್ರಸ್ ನಿವಾಸಿ.

ಹೊಯ್ಸಳ ಎನ್ನುವವರ ಪತ್ನಿಗೆ ಮೃತ ರವಿ ಕರೆ ಮಾಡುತ್ತಿದ್ದ.ಇದರಿಂದ ಕೋಪಗೊಂಡ ಹೊಯ್ಸಳ ತನ್ನ ಸ್ನೇಹಿತರಾದ ಬಳೆ ಮಂಜ ಮತ್ತು ಇತರರ ಜೊತೆಗೂಡಿ ಕೊಲೆ ಮಾಡಿದ್ದಾರೆ ಎಂದು ರವಿ ಸಹೋದರ ಆರೋಪಿಸಿದ್ದಾರೆ.

ಬೆಳಗ್ಗೆ 10.30 ರ ಸುಮಾರಿಗೆ ಅಕ್ಕನ ಮನೆಯಲ್ಲಿ ತಿಂಡಿ ತಿಂದು ನಂತರ ಮನೆಯಿಂದ ಹೊರಗೆ ಹೋಗಿದ್ದಾನೆ. ಮಧ್ಯಾಹ್ನ 12.30 ರಲ್ಲಿ ಅಕ್ಕ ಮಂಜುಳಾಗೆ ಕರೆ ಮಾಡಿದ ಅವರ ತಾಯಿ, ರವಿಗೆ ಯಾರೋ ಹಲ್ಲೆ ಮಾಡುತ್ತಿದ್ದಾರೆ ಎಂದು ಫೋನ್ ಮಾಡಿದ್ದರು ಎಂದು ಹೇಳಿದ್ದಾರೆ. ಇದನ್ನು ತಿಳಿದ ಕೂಡಲೇ ಮಂಜುಳಾ, ರವಿ ಮೊಬೈಲ್ ಗೆ ಕರೆ ಮಾಡಿದ್ದಾರೆ.

ರವಿಯ ಫೋನ್ ರಿಸೀವ್ ಮಾಡಿದ ಬಳೆಮಂಜ ಎಂಬ ವ್ಯಕ್ತಿ, ನಾವು ನಾಲ್ಕು ಜನರು ಇಲ್ಲೇ ಇದ್ದೇವೆ. ರವಿಯನ್ನು ಕರೆದುಕೊಂಡು ಮನೆ ಬಳಿಗೆ ಬರುತ್ತೇವೆ ಎಂದು ತಿಳಿಸಿದ್ದಾನೆ. ಇದಾದ ಬಳಿಕ ಹಳ್ಳಿ ಮೈಸೂರು ಗ್ರಾಮದ ಬಳೆಮಂಜ, ಟಿ.ಮಾಯಿಗೌಡನಹಳ್ಳಿಯ ಹೊಯ್ಸಳ, ಗುಡ್ಡೇನಹಳ್ಳಿಯ ಶ್ರೀಜಿತ್ ಮತ್ತು ಶೆಟ್ಟರಕೊಪ್ಪಲು ಗ್ರಾಮದ ಸಾಗರ್ ಎಂಬುವವರು ಮಂಜುಳಾ ಮನೆ ಬಳಿ ಬಂದಿದ್ದಾರೆ. ಆದರೆ ಅವರ ಜೊತೆ ರವಿ ಇರಲಿಲ್ಲ.

ಈ ವೇಳೆ ಹೊಯ್ಸಳ ಎಂಬಾತನ ಪತ್ನಿ ಸುಮಾಳಿಗೆ ರವಿ ನಿತ್ಯವೂ ಫೋನ್ ಮಾಡಿ ತೊಂದರೆ ಕೊಡುತ್ತಿದ್ದಾನೆ ಎಂದು ದೂರಿದ್ದಾರೆ. ಜೊತೆಗೆ ರವಿಯ ಮೊಬೈಲ್ ನಲ್ಲಿದ್ದ ಸುಮಾಳ ನಂಬರ್ ಸಹ ತೋರಿಸಿದ್ದಾರೆ.ಸುದ್ದಿ ತಿಳಿದು ಮನೆಯವರು ಹೊಯ್ಸಳನ ಮನೆ ಹತ್ತಿರ ದೌಡಾಯಿಸಿದಾಗ ರವಿಯನ್ನು ಕೊಲೆ ಮಾಡಲಾಗಿತ್ತು. ಮೃತನ ಕುತ್ತಿಗೆ ಬಲಭಾಗ ಮತ್ತು ಬಲಗೈಯಲ್ಲಿ ತರಚಿದ ಗಾಯವಾಗಿದ್ದು, ಟೀ ಶರ್ಟ್ನ ಬಲತೋಳು ಹರಿದಿತ್ತು.

ಹೊಯ್ಸಳನ ಪತ್ನಿ ಮೊಬೈಲ್ ಗೆ ಫೋನ್ ಮಾಡಿದ ಎಂಬ ಒಂದೇ ಕಾರಣಕ್ಕೆ ಮನೆಯೊಳಗೆ ಕೂಡಿಹಾಕಿ ನೇಣು ಬಿಗಿದಿದ್ದಾರೆ. ಇಲ್ಲವೇ ಬಲವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಹಳ್ಳಿ ಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.