Home Karnataka State Politics Updates ಧರ್ಮೋಕ್ರಸಿ ಅಳಿಸಿ ಡೆಮೋಕ್ರೇಸಿ ಉಳಿಸಲು ಸಿದ್ದರಾಮಯ್ಯ ಅಧಿಕಾರ ಹಿಡಿಬೇಕು!! ಯಾವುದಕ್ಕೂ ಹೆದರುವ ಪ್ರಶ್ನೆ ಇಲ್ಲ-ಸಂಗೀತ ನಿರ್ದೇಶಕ...

ಧರ್ಮೋಕ್ರಸಿ ಅಳಿಸಿ ಡೆಮೋಕ್ರೇಸಿ ಉಳಿಸಲು ಸಿದ್ದರಾಮಯ್ಯ ಅಧಿಕಾರ ಹಿಡಿಬೇಕು!! ಯಾವುದಕ್ಕೂ ಹೆದರುವ ಪ್ರಶ್ನೆ ಇಲ್ಲ-ಸಂಗೀತ ನಿರ್ದೇಶಕ ಹಂಸಲೇಖ

Hindu neighbor gifts plot of land

Hindu neighbour gifts land to Muslim journalist

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಮತ್ತೊಮ್ಮೆ ಭಾರೀ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಪೇಜಾವರ ಶ್ರೀ ಗಳ ಬಗ್ಗೆ ಮಾತನಾಡಿ ಎಲ್ಲರ ಆಕ್ರೋಶಕ್ಕೆ ಕಾರಣವಾಗಿ ಆ ಬಳಿಕ ಕ್ಷಮೆಯಾಚಿಸಿದ ಹಂಸಲೇಖ ಮತ್ತೊಮ್ಮೆ ತಮಗೇನು ಭಯವಿಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ.

ಮಾಗಡಿ ರೋಡ್ ನಲ್ಲಿ ಪೋಲಿ ಆಡಿ ಬಂದವನು ನಾನೂ, ಯಾರಿಗೂ ಹೆದರುವುದಿಲ್ಲ, ನಾನೇನು ಭಯದಿಂದ ಬದುಕುವುದಿಲ್ಲ, ನಿಮ್ಮ ಧರ್ಮೋಕ್ರಸಿ ರಾಜಕಾರಣವಿದ್ದರೆ,ಡೆಮೋಕ್ರಸಿ ಉಳಿಸಲು ಸಿದ್ದರಾಮಯ್ಯ ಬರಬೇಕು ಎಂದು ನಿನ್ನೆ ಗಾಂಧಿನಗರದಲ್ಲಿ ನಡೆದ ಆತ್ಮಕಥನ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಹೇಳಿದ್ದಾರೆ.

ನನಗೆ ಬೆಂಬಲ ನೀಡಿದವರು ಸಿದ್ದರಾಮಯ್ಯ. ನನ್ನ ಶಾಲೆಗೆ ಜಾಗದ ಅಗತ್ಯವಿದ್ದಾಗ ಐದು ಎಕರೆ ಜಾಗ ಶಿಫಾರಸ್ಸು ಮಾಡಿದ್ದರು. ಈ ದೇಶದ ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಿದ್ದರಾಮಯ್ಯ ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರಬೇಕು. ನನಗೆ ಈಗ ಎಪ್ಪತ್ತಾದರೂ ತಿನ್ನುವುದು ಒಪ್ಪತ್ತು ಎಂದು ವ್ಯಂಗ್ಯವಾಡಿದ್ದಾರೆ.