Home Interesting ಈ ಅಂಧ ಮಹಿಳೆ ನುಡಿದ ಭವಿಷ್ಯವಾಣಿ ಇದುವರೆಗೂ ಸುಳ್ಳಾಗಿಲ್ಲವಂತೆ |2022ಕ್ಕೆ ಏನಾಗಲಿದೆ ಎಂಬ ಬಗ್ಗೆ ಬಾಬಾ...

ಈ ಅಂಧ ಮಹಿಳೆ ನುಡಿದ ಭವಿಷ್ಯವಾಣಿ ಇದುವರೆಗೂ ಸುಳ್ಳಾಗಿಲ್ಲವಂತೆ |2022ಕ್ಕೆ ಏನಾಗಲಿದೆ ಎಂಬ ಬಗ್ಗೆ ಬಾಬಾ ವಂಗಾ ಬರೆದ ಭವಿಷ್ಯವಾಣಿಯಲ್ಲಿ ಏನಿದೆ ಗೊತ್ತಾ??

Hindu neighbor gifts plot of land

Hindu neighbour gifts land to Muslim journalist

ಪ್ರಕೃತಿಯಲ್ಲಿ ನಡೆಯೋ ವಿಚಿತ್ರತೆಗಳ ಬಗ್ಗೆ ಬಲ್ಲವರು ಯಾರು ಇಲ್ಲ.ಆದ್ರೆ ಕೆಲವೊಂದು ಸ್ವಾಮೀಜಿಗಳು ಹೇಳಿರೋ ಮಾತುಗಳು ನಿಜವಾಗಿ ಸಂಭವಿಸಿರೋದು ಉಂಟು. ಕೆಲವೊಂದು ಸುಳ್ಳಾದರೆ ಇನ್ನೂ ಕೆಲವು ನಂಬಲೇ ಬೇಕಾಗಿದೆ. ಆದ್ರೆ ಇವೆಲ್ಲವೂ ನಿಮ್ಮೆಲ್ಲರ ಮನಸ್ಥಿತಿಗೆ ಸೀಮಿತವಾಗಿದೆ. ಇದೀಗ ಅಂಧ ಮಹಿಳೆಯೊಬ್ಬರು ಭವಿಷ್ಯ ನುಡಿದಿದ್ದು,ಇವರು ಹೇಳಿರುವ ಭವಿಷ್ಯ ಇದುವರೆಗೂ ಸುಳ್ಳಾಗಿಲ್ಲವಂತೆ!!

ಹೌದು ಬಲ್ಗೇರಿಯಾದ ಬಾಬಾ ವಂಗಾ ಅವರು ನುಡಿದಿರುವ ಭವಿಷ್ಯವಾಣಿಗಳೆಲ್ಲಾ ನಿಜವಾಗಿದೆ. ಇವರ ನಿಜವಾದ ಹೆಸರು ವಾಂಜೆಲಿಯಾ ಗುಶ್ಟೆರೋವಾ ಆಗಿದ್ದು, ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದು ಕೂಡ ಕರೆಯುತ್ತಾರೆ.ಇವರು 9/11 ಭಯೋತ್ಪಾದಕ ದಾಳಿ ಮತ್ತು ಬ್ರೆಕ್ಸಿಟ್ ಬಗ್ಗೆ ಭವಿಷ್ಯ ನುಡಿದಿದ್ದರು.
1911 ರಲ್ಲಿ ಜನಿಸಿದ ಬಾಬಾ ವಂಗಾ, 12 ನೇ ವಯಸ್ಸಿನಲ್ಲಿ ಭಾರಿ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ತನ್ನ ದೃಷ್ಟಿ ಕಳೆದುಕೊಂಡ ನಂತರ, ಭವಿಷ್ಯವಾಣಿ ಹೇಳುವುದಕ್ಕಾಗಿ ದೇವರಿಂದ ಉಡುಗೊರೆ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.

ಆಕೆ 1996 ರಲ್ಲಿ ಮರಣಹೊಂದಿದ್ದು, 5079 ರವರೆಗೆ ನಡೆಯುವ ಮುನ್ನೋಟಗಳನ್ನು ಬರೆದಿದ್ದಾರೆ. ಅಲ್ಲಿಗೆ ಪ್ರಪಂಚವು ಕೊನೆಗೊಳ್ಳುತ್ತದೆ ಎಂಬುದು ಬಾಬಾ ವಂಗಾ ಭವಿಷ್ಯ ವಾಣಿಯಾಗಿದೆ. ಸೋವಿಯತ್ ಒಕ್ಕೂಟದ ವಿಸರ್ಜನೆ, ರಾಜಕುಮಾರಿ ಡಯಾನಾ ಸಾವು ಮತ್ತು 2004 ರ ಥೈಲ್ಯಾಂಡ್ ಸುನಾಮಿ ಮತ್ತು ಬರಾಕ್ ಒಬಾಮಾರ ಅಧ್ಯಕ್ಷತೆಯ ಬಗ್ಗೆ ಬರೆದಿದ್ದ ಭವಿಷ್ಯವಾಣಿ ನಿಜವಾಗಿದ್ದವು.ಇದೀಗ 2022ಕ್ಕೆ ಏನೇನಾಗಲಿವೆ ಎಂಬ ಬಗ್ಗೆ ಬಾಬಾ ವಂಗಾ ಅವರು ಬರೆದಿರೋ ಭವಿಷ್ಯವಾಣಿ ಇಲ್ಲಿವೆ:

2022 ರಲ್ಲಿ ಹಲವಾರು ಏಷ್ಯಾದ ದೇಶಗಳು ಮತ್ತು ಆಸ್ಟ್ರೇಲಿಯಾವು ತೀವ್ರವಾದ ಪ್ರವಾಹಕ್ಕೆ ತುತ್ತಾಗಲಿದೆ ಎಂದು ವಂಗಾ ಭವಿಷ್ಯ ನುಡಿದಿದ್ದಾರೆ.ಈಗಾಗಲೇ ಕೋವಿಡ್-19 ನಿಂದ ಪ್ರಪಂಚ ಹಳಿ ತಪ್ಪಿದ್ದು, ಇನ್ನೂ ಸುಧಾರಿಸಿಲ್ಲ. 2022ರಲ್ಲಿ ಸೈಬೀರಿಯಾದಲ್ಲಿ ಮಾರಣಾಂತಿಕ ವೈರಸ್ ಅನ್ನು ಸಂಶೋಧಕರ ತಂಡವು ಕಂಡುಹಿಡಿಯಲಿದೆ ಎಂದು ಬಾಬಾ ವಂಗಾ ಬರೆದಿದ್ದಾರೆ.ಅಲ್ಲದೆ ಕಳೆದ ಕೆಲವು ವರ್ಷಗಳಿಂದ ನೀರಿನ ಕೊರತೆ ಆತಂಕಕಾರಿ ವಿಷಯವಾಗಿದ್ದು,ಮುಂಬರುವ ವರ್ಷದಲ್ಲಿ ಪ್ರಪಂಚದಾದ್ಯಂತದ ಅನೇಕ ನಗರಗಳು ಕುಡಿಯುವ ನೀರಿನ ಕೊರತೆಯನ್ನು ಎದುರಿಸಬಹುದು ಎಂದು ವಂಗಾ ಹೇಳಿದ್ದಾರೆ.

ಇಷ್ಟೇ ಅಲ್ಲದೆ ಮಿಡತೆಗಳ ಹಿಂಡು ಬೆಳೆಗಳು ಮತ್ತು ಕೃಷಿ ಪ್ಲಾಟ್‌ಗಳ ಮೇಲೆ ದಾಳಿ ಮಾಡುತ್ತವೆ. ಇದು ಭಾರತದಲ್ಲಿ ಅಪಾರ ಕ್ಷಾಮವನ್ನು ಉಂಟುಮಾಡುತ್ತದೆ ಎಂದು ಅತೀಂದ್ರಿಯ ಭವಿಷ್ಯ ನುಡಿದಿದೆ. ಈಗಾಗಲೇ ಮಿಡತೆಗಳ ದೊಡ್ಡ ಹಿಂಡುಗಳು 2020ರಲ್ಲಿ ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ದಾಳಿ ಮಾಡಿವೆ.

ಇತ್ತೀಚಿನ ವರ್ಷಗಳಲ್ಲಿ ವರ್ಚುವಲ್ ರಿಯಾಲಿಟಿ ಬಳಕೆಯು ಖಂಡಿತವಾಗಿಯೂ ಹೆಚ್ಚಾಗಿದೆ. ಆದರೆ, ವರ್ಚುವಲ್ ರಿಯಾಲಿಟಿ ನಿಜವಾಗಿಯೂ ಸ್ವಾಧೀನಪಡಿಸಿಕೊಳ್ಳುವ ವರ್ಷ 2022 ಎಂದು ವಂಗಾ ಹೇಳಿದ್ದಾರೆ.ಭೂಮಿಯ ಮೇಲಿನ ಜೀವವನ್ನು ಹುಡುಕಲು ಅನ್ಯಗ್ರಹ ಜೀವಿಗಳು ಕ್ಷುದ್ರಗ್ರಹವನ್ನು ಕಳುಹಿಸುತ್ತಾರೆ ಎಂದು ವಂಗಾ ಭವಿಷ್ಯವಾಣಿ ನುಡಿದಿದ್ದಾರೆ.ಇವರ ಭವಿಷ್ಯವಾಣಿಯ ಎಲ್ಲಾ ಮಾತುಗಳು ನಿಜವಾಗುತ್ತೇ ಎನ್ನುವ ನಂಬಿಕೆಯಂತೆಯೇ ಎಲ್ಲಾ ಸಂಭವಿಸುತ್ತೋ ನೋಡಬೇಕಿದೆ..