Home Karnataka State Politics Updates ರುದ್ರಾಕ್ಷಿ ಹಾರ ಧರಿಸಲು ರಾಹುಲ್ ಗಾಂಧಿ ನಕಾರ, ನೀವೆಂತಹ ಹಿಂದೂ ಎಂದು ಬಿಜೆಪಿ ಟೀಕೆ !

ರುದ್ರಾಕ್ಷಿ ಹಾರ ಧರಿಸಲು ರಾಹುಲ್ ಗಾಂಧಿ ನಕಾರ, ನೀವೆಂತಹ ಹಿಂದೂ ಎಂದು ಬಿಜೆಪಿ ಟೀಕೆ !

Hindu neighbor gifts plot of land

Hindu neighbour gifts land to Muslim journalist

ಡೆಹ್ರಾಡೂನ್: ಉತ್ತರಾಖಂಡದ ಕಾಂಗ್ರೆಸ್ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕಾರ್ಯಕರ್ತರು ರುದ್ರಾಕ್ಷಿ ಹಾರ ಧರಿಸಲು ಕೊಟ್ಟಾಗ ಅದನ್ನು ನಿರಾಕರಿಸಿದ ವೀಡಿಯೋ ಒಂದು ಇದೀಗ ವೈರಲ್ ಆಗಿದೆ. ಈ ವೀಡಿಯೋ ಹಿಡಿದುಕೊಂಡು ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.

ಈ ವೀಡಿಯೋದಲ್ಲಿ ಕಾರ್ಯಕರ್ತರು ರುದ್ರಾಕ್ಷಿ ಹಾರ ಧರಿಸಲು ಕೊಡುತ್ತಿದ್ದಂತೆ ರಾಹುಲ್ ಗಾಂಧಿ ಅದನ್ನು ನಿರಾಕರಿಸುತ್ತಾರೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಬಿಜೆಪಿ ನಾಯಕ ಅಮಿತ್ ಮಾಳವೀಯ ವೀಡಿಯೋ ಪೋಸ್ಟ್ ಮಾಡಿ, ಈ ವ್ಯಕ್ತಿಗೆ ಚುನಾವಣೆಗೆ ಮುನ್ನ ದೇವಸ್ಥಾನಗಳ ನೆನಪಾಗುತ್ತದೆ. ತಾನು ಹಿಂದೂ ಎಂದು ಹೇಳಿಕೊಂಡು ತಿರುಗುವ ವ್ಯಕ್ತಿಗೆ ಇದೀಗ ಧರ್ಮಾಭಿಮಾನ ಉಕ್ಕಿ ಹರಿದಿದೆ ಎಂದು ಕಟು ವ್ಯಂಗ್ಯವಾಡಿದ್ದಾರೆ.

ವಾರಗಳ ಹಿಂದೆ ಜೈಪುರದಲ್ಲಿ ನಡೆದ ಬೆಲೆ ಏರಿಕೆ ವಿರುದ್ಧದ ರ್ಯಾಲಿಯಲ್ಲಿ, ದೇಶದಲ್ಲಿ ಎರಡು ಪದಗಳಾದ ಹಿಂದೂ ಮತ್ತು ಹಿಂದುತ್ವದ ಬಗ್ಗೆ ಘರ್ಷಣೆ ನಡೆಯುತ್ತಿದೆ. ಇದು ಒಂದು ಪದವಲ್ಲ. ಈ ಎರಡೂ ಪದಗಳಿಗೂ ಬೇರೆ ಬೇರೆ ಅರ್ಥವಿದೆ. ನಾನು ಹಿಂದೂ ಆದರೆ ಹಿಂದುತ್ವವಾದಿ ಅಲ್ಲ. ಹಿಂದೂ ಸತ್ಯವನ್ನು ಹುಡುಕುವ ಕೆಲಸ ಮಾಡುತ್ತದೆ. ಹಿಂದುತ್ವವಾದಿ ಅಧಿಕಾರವನ್ನು ಹುಡುಕುವ ಕಾರ್ಯವನ್ನು ಮಾಡುತ್ತದೆ. ಹಾಗಾಗಿ ನಾನೂ ಹಿಂದೂ ಎಂದಿದ್ದರು ರಾಹುಲ್ ಗಾಂಧಿ.

कांग्रेस के चुनावी हिन्दू की हकीकत देख लीजिए। मंच पर मंत्रोच्चार चल रहा है और @RahulGandhi हाथ बांधे खड़े हैं। इतना ही नहीं जब इन्हें रुद्राक्ष की माला पहनाई जा रही थी तो इन्होंने साफ मना कर दिया।
संस्कार बोलते हैं pic.twitter.com/2R31LHTU0S

— BJP Uttarakhand (@BJP4UK) December 17, 2021

ಆದರೆ ಅತ್ತ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ಮುಗಿಬೀಳುತ್ತಿದ್ದಂತೆ ಅತ್ತ ಕಾಂಗ್ರೆಸ್ ಕಾರ್ಯಕರ್ತರು ತಿರುಗೇಟು ನೀಡುತ್ತಿದ್ದಾರೆ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ವೇಳೆ ಮೌಲ್ವಿಯೊಬ್ಬರು ಮುಸ್ಲಿಮರು ಧರಿಸುವ ಟೋಪಿಯನ್ನು ಧರಿಸುವಂತೆ ಕೇಳಿಕೊಂಡಾಗ ಅದನ್ನು ಧರಿಸಲು ನಿರಾಕರಿಸಿದ್ದರು. ಈ ವೀಡಿಯೋವನ್ನು ಕಾಂಗ್ರೆಸ್ ನಾಯಕರು ಪೋಸ್ಟ್ ಮಾಡಿಕೊಂಡು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಆದರೆ ವಾಸ್ತವವಾಗಿ ಮೋದಿ ಒಬ್ಬರು ಹಿಂದೂ. ಅದೇ ಕಾರಣಕ್ಕೆ ಟೋಪಿ ಧರಿಸಿಲ್ಲ. ಆದರೆ ರಾಹುಲ್ ಹಿಂದೂ ಎಂದು ಹೇಳಿಕೊಂಡು ಹಿಂದೂಗಳು ಬಳಸುವ ರುದ್ರಾಕ್ಷಿ ಸರ ಧರಿಸಲು ತಿರಸ್ಕರಿಸಿದ್ದು ಎಷ್ಟು ಸರಿ ? ಎನ್ನುವುದು ಒಂದು ವಾದ.