Home News ಗಂಡನೊಂದಿಗೆ ವಿಚ್ಛೇದನದ ಬೆನ್ನಿಗೇ ಪ್ರಿಯಕರನೊಂದಿಗೆ ಲಾಡ್ಜ್ ಗೆ ತೆರಳಿದ ವೀಣಾ | ಇಬ್ಬರ ಜತೆ ಮಾಡಿದ...

ಗಂಡನೊಂದಿಗೆ ವಿಚ್ಛೇದನದ ಬೆನ್ನಿಗೇ ಪ್ರಿಯಕರನೊಂದಿಗೆ ಲಾಡ್ಜ್ ಗೆ ತೆರಳಿದ ವೀಣಾ | ಇಬ್ಬರ ಜತೆ ಮಾಡಿದ ಅನೈತಿಕ ಸಂಬಂಧ ಆಕೆಯ ಜೀವನವನ್ನೇ ಅಂತ್ಯ ಮಾಡಿತು !!

Hindu neighbor gifts plot of land

Hindu neighbour gifts land to Muslim journalist

ಬಾಗೇಪಲ್ಲಿ: ಗಂಡನೊಂದಿಗೆ ವಿಚ್ಛೇದನ ಪಡೆದು ಮಾಜಿ ಪ್ರಿಯಕರನೊಂದಿಗೆ ಲಾಡ್ಜ್ ಗೆ ತೆರಳಿದ್ದ ಮಹಿಳೆಯೊಬ್ಬಳು ಅಲ್ಲೇ ದುರಂತ ಅಂತ್ಯಕಂಡಿದ್ದಾಳೆ. ಅಲ್ಲಿ ನಡೆದ ಸಾವಿಗೂ ಮುನ್ನ ಆಕೆ ಬರೆದಿಟ್ಟ ಡೆತ್ ನೋಟ್ ನಲ್ಲಿ ಆಕೆ ಇಬ್ಬರು ಪುರುಷರೊಂದಿಗಿನ ಅಕ್ರಮ ಸಂಬಂಧದ ಬಗ್ಗೆಯೂ ಉಲ್ಲೇಖಿಸಿದ್ದಾಳೆ. ಸಾಯುವ ಮೊದಲು ಆಕೆಯ ಸೆಕ್ಸ್ ಲೈಫ್ ಅನ್ನು ನಿಯತ್ತಾಗಿ ದಾಖಲಿಸಿ ಸರಿದು ಹೋಗಿದ್ದಾಳೆ.

ಕೋಲಾರ ಜಿಲ್ಲೆಯ ಮುಳಬಾಗಿಲು ನಿವಾಸಿ ವೀಣಾ (26) ಇದೀಗ ಮೃತ ಯುವತಿ. ಮೊದಲಿಗೆ ಮುಳಬಾಗಿಲಿನ ಮುರಳಿ ಎಂಬಾತನೊಂದಿಗೆ ವೀಣಾಗೆ ವಿವಾಹವಾಗಿತ್ತು. ಅದು
8 ವರ್ಷಗಳ ಹಿಂದೆಕೆ ನಡೆದ ವಿವಾಹ. ಆದ್ರೆ ಅದು ಕೆಲ ದಿನಗಳ ಹಿಂದೆ ವೀಣಾ ಆತನೊಂದಿಗೆ ವಿಚ್ಚೇದನ ಪಡೆಯುವ ಮೂಲಕ ಕೊಂಡಿ ಕಳಚಿಕೊಂಡಿತ್ತು.

ನಂತರ ಮಾಜಿ ಪ್ರಿಯಕರ ಮುಳಬಾಗಿಲಿನ ಪುನೀತ್ ರಾಜಕಮಾರ್ ಮತ್ತು ಲಕ್ಷ್ಮೀಕಾಂತ್ ಎಂಬುವರೊಂದಿಗೆ ಆಕೆ ತನ್ನ ಅತೃಪ್ತ ಬಯಕೆ ತೀರಿಸಿ ಕೊಳ್ಳುತ್ತಿದಳು ಎನ್ನಲಾಗಿದೆ.
ಮೊನ್ನೆ ಮಾಜಿ ಪ್ರಿಯಕರ ಪುನೀತ್ ಜತೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಬಾಲಾಜಿ ಲಾಡ್ಜ್ ಗೆ ಆಕೆ ಹೋಗಿದ್ದಳು. ಅಲ್ಲಿ ಕೊಠಡಿ ತೆಗೆದುಕೊಂಡು ವೀಣಾ ಉಳಿದುಕೊಂಡಿದ್ದಳು. ನಿನ್ನೆ(ಶುಕ್ರವಾರ) ಅದ್ಹೇನಾಯ್ತೋ ಏನೋ, ಲಾಡ್ಜ್ ಕೋಣೆಯಲ್ಲೇ ವೀಣಾಳ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇಬ್ಬರ ಜತೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಕುಟುಂಬ ಸದಸ್ಯರಿಗೆ ಸಡನ್ ಆಗಿ ತಿಳಿಯಿತು ಎಂದು ಮರ್ಯಾದೆಗೆ ಅಂಜಿ ನೇಣು ಬಿಗಿದು ಕೊಂಡಿರುವುದಾಗಿ ತಿಳಿಸಿ ಆಕೆ ಡೆತ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಈ ಬಗ್ಗೆ ಬಾಗೇಪಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಡಿ.ಆರ್.ನಾಗರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು, ವೀಣಾಳ ಪ್ರಿಯಕರ ಪುನೀತ್ ಅನ್ನು ಬಂಧಿಸಿದ್ದಾರೆ.