Home ದಕ್ಷಿಣ ಕನ್ನಡ ಉಪ್ಪಿನಂಗಡಿ : ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿ ಸಮವಸ್ತ್ರ ಹರಿದು ಮಾನಭಂಗಕ್ಕೆ ಯತ್ನಿಸಿ ಕೊಲೆ...

ಉಪ್ಪಿನಂಗಡಿ : ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿ ಸಮವಸ್ತ್ರ ಹರಿದು ಮಾನಭಂಗಕ್ಕೆ ಯತ್ನಿಸಿ ಕೊಲೆ ಬೆದರಿಕೆ ಮತ್ತು ಪೊಲೀಸ್ ಇಲಾಖೆ ವಾಹನ ಹಾನಿ | 10 ಮಂದಿ ಪಿಎಫ್ಐ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು

Hindu neighbor gifts plot of land

Hindu neighbour gifts land to Muslim journalist

ಡಿ. 14 ರಂದು ರಾತ್ರಿ ಉಪ್ಪಿನಂಗಡಿಯಲ್ಲಿ ಠಾಣೆ ಮುಂಭಾಗ ನಡೆದಿದ್ದ ಘಟನೆಯಲ್ಲಿ ಪೊಲೀಸರಿಂದಲೇ ಮತ್ತೊಂದು ಪ್ರಕರಣ ದಾಖಲಾಗಿದೆ. ಪ್ರತಿಭಟನೆಯ ವೇಳೆ 10 ಮಂದಿ ಪಿಎಫೈ ಕಾರ್ಯಕರ್ತರು ಇಬ್ಬರು ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿ ಸಮವಸ್ತ್ರ ಹರಿದು ಮಾನಭಂಗಕ್ಕೆ ಯತ್ನಿಸಿ ಕೊಲೆ ಬೆದರಿಕೆ ಒಡ್ಡಿದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳನ್ನು ಮೊಹಮ್ಮದ್ ತಾಹೀರ್, ಸ್ನಾಧಿಕ್, ಅಬ್ದುಲ್ ಮುಬಾರಕ್, ಅಬುಲ್ ಶರೀನ್, ಮೊಹಮ್ಮದ್ ಜಾಹಿರ್, ಸುಜೀರ್ ಮಹಮ್ಮದ್ ಪೈಜಲ್, ಮೊಹಮ್ಮದ್ ಹನೀಫ್, ಎನ್ ಕಾಸಿಂ .ಮೊಹಮ್ಮದ್ ಆಸಿಫ್ ಹಾಗೂ ತುಪೈಲ್ ಮಹಮ್ಮದ್ ಕೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ಆರೋಪಿಗಳ ವಿರುದ್ಧ ಐಪಿಸಿ ಕಲಂ 1860 (U/S
143,147,151,341,354,332,353,427,307,269,270,149 ಹಾಗೂ ಕರ್ನಾಟಕ ಆಸ್ತಿ ಹಾನಿ ತಡೆ ಮತ್ತು ನಷ್ಟ 1981(KARNATAKA PREVENTION OF DISTRUCTION & LOSS OF PROPERTY ACT 1981) (U/s-2(A)) ರಂತೆ ಪ್ರಕರಣ ದಾಖಲಾಗಿದೆ.

ಈ ಆರೋಪಿಗಳು ಉಪ್ಪಿನಂಗಡಿಯ ಠಾಣೆಯ ಮುಂಭಾಗ ಪ್ರತಿಭಟನೆಯ ವೇಳೆ ಠಾಣೆಗೆ ಕಲ್ಲು ಬಿಸಾಡಿ ಠಾಣೆಯ ಮುಂಭಾಗದ ಗಾಜುಗಳನ್ನು ಪುಡಿ ಮಾಡಿದ್ದಾರೆ. ಅದಲ್ಲದೆ ಠಾಣೆ ಎದುರು ನಿಲ್ಲಿಸಿದ ಇಲಾಖಾ ವಾಹನಗಳನ್ನು ಜಖಂಗೊಳಿಸಿ ಸರ್ಕಾರಿ ಸೊತ್ತುಗಳಿಗೆ ನಷ್ಟವುಂಟು ಮಾಡಿದ್ದಾರೆ. ಇಬ್ಬರು ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿ ಸಮವಸ್ತ್ರ ಹರಿದು ಮಾನಭಂಗಕ್ಕೆ ಯತ್ನಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಕೂಡ ‌ಉಪ್ಪಿನಂಗಡಿ ಪಿಎಸೈ ಓಮನ ಎನ್ ಕೆ ರವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.