ಮೈ ಮೇಲೆ ಬಿಸಿ ನೀರು ಸುರಿದುಕೊಂಡು ದಾರುಣವಾಗಿ ಮೃತಪಟ್ಟ ಎರಡು ವರ್ಷದ ಕಂದಮ್ಮ

ಆಟವಾಡುತ್ತಾ ತಿಳಿಯದೆ ಮೈಮೇಲೆ ಬಿಸಿ ನೀರು ಸುರಿದುಕೊಂಡಿದ್ದ 2 ವರ್ಷದ ಮಗು ಮೃತಪಟ್ಟ ಘಟನೆ ಮೈಸೂರು ತಾಲೂಕಿನ ದಾಸನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ರಾಮು-ಜಯಲಕ್ಷ್ಮೀ ದಂಪತಿಯ ಪುತ್ರಿ ಆದ್ಯಾ(2) ಮೃತ ಮಗು. ಮಗುವನ್ನು ಸ್ನಾನ ಮಾಡಿಸುವಾಗ ತಣ್ಣೀರು ತರುವುದಕ್ಕೆಂದು ತಾಯಿ ಹೋಗಿದ್ದರು. ಈ ವೇಳೆ ತಿಳಿಯದೆ ಮಗು ಮೈಮೇಲೆ ಬಿಸಿ ನೀರು ಸುರಿದುಕೊಂಡಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೆ.ಆರ್.ಆಸ್ಪತ್ರೆಯಲ್ಲಿ ಮಗು ಕೊನೆಯುಸಿರೆಳೆದಿದೆ.

Leave A Reply

Your email address will not be published.