ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು

Share the Article

ಮಂಗಳೂರು: ನಗರದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

ಮಂಗಳಾದೇವಿ ಬಳಿಯ ಮೋರ್ಗನ್ ಗೇಟ್ ಸಮೀಪ ಪತಿ, ಪತ್ನಿ ತಮ್ಮ ಇಬ್ಬರು ಮಕ್ಕಳಿಗೆ ವಿಷ ನೀಡಿ ನೇಣಿಗೆ ಶರಣಾಗಿದ್ದಾರೆ.

ನಾಗೇಶ್ ಶೆರಗುಪ್ಪಿ(30), ವಿಜಯಲಕ್ಷ್ಮಿ (26), ಮಕ್ಕಳಾದ ಸ್ವಪ್ನ (4),ಸಮರ್ಥ್ (4) ಮೃತ ಪಟ್ಟವರು.ಇವರು ಬಾಗಲಕೋಟೆಯವರೆಂದು ತಿಳಿದು ಬಂದಿದೆ.ಈ ಆತ್ಮಹತ್ಯೆಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಮಂಗಳೂರು ಸಿಟಿ ಪೋಲಿಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Leave A Reply