ರಾಜ್ಯಾದ್ಯಂತ ಡಿಸೆಂಬರ್ 8ರಿಂದ ಮದ್ಯ ಮಾರಾಟ ಬಂದ್ | ಮದ್ಯಪ್ರಿಯರಲ್ಲಿ ಶುರುವಾಗಿಯೇ ಬಿಡ್ತು ಚಡಪಡಿಕೆ!

Share the Article

ಡಿಸೆಂಬರ್ 10 ರಂದು ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 8 ರಿಂದ 3 ದಿನಗಳ ಕಾಲ ವೈನ್ ಸ್ಟೋರ್ ಮತ್ತು ಬಾರ್ ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಈ ಆಚರಣೆ ರಾಜ್ಯಾದ್ಯಂತ ಜಾರಿಯಲ್ಲಿರಲ್ಲಿರಲಿದೆ.

ಮೂರು ದಿನ ಮದ್ಯದಂಗಡಿಗಳನ್ನು ಬಂದ್ ಮಾಡುವ ಸುದ್ದಿ ಹಬ್ಬುತ್ತಿದ್ದಂತೆ ಮದ್ಯ ಪ್ರಿಯರಲ್ಲಿ ತೀವ್ರ ಚಡಪಡಿಕೆ ಕಂಡು ಬಂದಿದೆ. ಮೂರು ದಿನಕ್ಕೆ ಬೇಕಾದಷ್ಟು ಮದ್ಯ ಸಂಗ್ರಹಣೆ ಮಾಡುವತ್ತ ಅವರ ಚಿತ್ತ ನೆಟ್ಟಿದೆ.

25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ.

ಮುಖ್ಯ ಚುನಾವಣಾಧಿಕಾರಿಗಳ ಈ ಸೂಚನೆಯನ್ನು ರಾಜ್ಯಾದ್ಯಂತ ಮದ್ಯ ಮಾರಾಟಗಾರರು ಖಂಡಿಸಿದ್ದಾರೆ. ಡಿಸೆಂಬರ್ 8 ರಿಂದ ಡಿಸೆಂಬರ್ 10 ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ ಬಂದ್ ಆದ್ರೆ ಭಾರೀ ನಷ್ಟವಾಗಲಿದೆ ಎಂದು ಬಾರ್ ಮಾಲೀಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Leave A Reply