ವಿಮಾನ ನಿಲ್ದಾಣಕ್ಕೆ ಬಂದಿಳಿದ ತಾಯಿಯನ್ನು ಆದರದಿಂದ ಸ್ವಾಗತಿಸಲು ಹೊರಟ ಮಗ!! ನಿಲ್ದಾಣ ತಲುಪುತ್ತಿದ್ದಂತೆ ನಡೆಯಿತು ಅಚಾತುರ್ಯ

Share the Article

ಹೊರದೇಶದಿಂದ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಾಯಿಯನ್ನು ಸ್ವಾಗತಿಸಲು ಆಗಮಿಸಿದ್ದಾಗ ಆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ತಮಾಷೆಗೆ ಕಾರಣವಾಗಿದೆ. ಮಗನನ್ನು ಕಂಡು ತಾಯಿ ತೋರಿದ ಪ್ರೀತಿಗೆ ಜಾಲತಾಣ ಪ್ರಿಯರು ನಕ್ಕಿದ್ದು ಯಾಕೆ ಗೊತ್ತಾ. ಇಲ್ಲಿದೆ ತಾಯಿ ಮಗನ ಪ್ರೀತಿಯ ಚಿತ್ರಣ.

https://www.instagram.com/reel/CWjloLRA9zs/?utm_source=ig_web_copy_link

ಘಟನೆ ವಿವರ:ತನ್ನ ತಾಯಿಯನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಪುತ್ರನೋರ್ವ ಫಲಕದೊಂದಿಗೆ ಬಂದಿದ್ದು, ತಾಯಿಯನ್ನು ಕಂಡು ಖುಷಿ ಹಂಚಿಕೊಳ್ಳಲು ಹತ್ತಿರ ತೆರಳಿದ್ದೇ ತಡ ಆತನಿಗೆ ಬಾಸುಂಡೆ ಬರುವ ರೀತಿಯಲ್ಲಿ ತಾಯಿ ಬಾರಿಸಿದ್ದಾರೆ. ಕಾಲಿನ ಚಪ್ಪಲಿ ತೆಗೆದು ಮಗನನ್ನು ಹೊಡೆದ ತಾಯಿ, ಆತ ತಪ್ಪಿಸಿಕೊಂಡಾಗ ಆತನಿಗೆ ಚಪ್ಪಲಿ ಎಸೆದಿದ್ದಾಳೆ.

ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಈ ಬಗ್ಗೆ ಕೆಲವರು ತಾಯಿ ಮತ್ತು ಮಗನ ಹೊಡೆದಾಟ ಆತನ ಮೇಲೆ ತಾಯಿಗಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ ಎಂದರೆ, ಇನ್ನೂ ಕೆಲವರು ತಾಯಿ -ಮಗನ ಮಿಸ್ ಮಾಡಿಕೊಂಡಿದ್ದಾರೋ ಎಂದು ಭಾವುಕರಾಗಿದ್ದಾರೆ.

Leave A Reply