ಪಬ್ ನಲ್ಲಿ ಬಿಗ್ ಬಾಸ್ ಸ್ಪರ್ಧಿ ಮೇಲೆ ‘ಕಿರಿಕ್’ | ಫೋಟೋ ವಿಚಾರಕ್ಕೆ ಸಂಬಂಧಿಸಿದಂತೆ ಬಿಯರ್ ಬಾಟಲ್ ನಿಂದ ಕೀರ್ತಿ ಮೇಲೆ ಹಲ್ಲೆ

Share the Article

ಬೆಂಗಳೂರು :ಬಿಗ್​ಬಾಸ್ ಸ್ಪರ್ಧಿ ಕಿರಿಕ್​ ಕೀರ್ತಿ ಬೆಂಗಳೂರಿನ ಸದಾಶಿವನಗರದ ಪಬ್ ನಲ್ಲಿ ತಡರಾತ್ರಿ ಇದ್ದ ವೇಳೆ ಪೋಟೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದಿದ್ದು ವ್ಯಕ್ತಿಯೊಬ್ಬ ಬಿಯರ್ ಬಾಟಲ್ ನಿಂದ ಕೀರ್ತಿ ಮೇಲೆ ಹಲ್ಲೆ ಮಾಡಿರುವ ಘಟನೆ ನಿನ್ನೆ ನಡೆದಿದೆ.

ಕಿರಿಕ್ ಕೀರ್ತಿ ತಮ್ಮ ಸ್ನೇಹಿತರೊಂದಿಗೆ ಪಬ್‌ಗೆ ಹೋಗಿದ್ದರು.ಪಕ್ಕದ ಟೇಬಲ್‌ನಲ್ಲಿದ್ದ ವ್ಯಕ್ತಿಯೊಬ್ಬ ಕೀರ್ತಿ ಅವರ ಫೋಟೋ ಕ್ಲಿಕ್ಕಿಸಿದ್ದ. ಫೋಟೋ ಕ್ಲಿಕ್ಕಿಸಿದ್ದನ್ನು ಕೀರ್ತಿ ಪ್ರಶ್ನೆ ಮಾಡಿದ್ದಾರೆ. ಆ ಕಾರಣಕ್ಕೆ ಜಗಳ ಆರಂಭ ಆಯಿತು. ಫೋಟೋ ಕ್ಲಿಕ್ಕಿಸಿದ ವ್ಯಕ್ತಿ ಕ್ಷಮೆ ಕೇಳಿದ್ರೂ ಕೂಡ ಬಿಡದೇ ಕೀರ್ತಿ ಬೈಯ್ಯಲು ಶುರು ಮಾಡಿದ್ದರು. ಬಾಯಿಗೆ ಬಂದಂತೆ ಮಾತನಾಡಿದ್ದ ಕಿರಿಕ್ ಕೀರ್ತಿ ವರ್ತನೆಗೆ ಆ ವ್ಯಕ್ತಿ ರೋಸಿ ಹೋಗಿದ್ದ. ಫೋಟೋ ಕ್ಲಿಕ್ಕಿಸಿದವನ ಮೊಬೈಲ್​ ಕಸಿದುಕೊಳ್ಳಲು ಕೂಡ ಕೀರ್ತಿ ಪ್ರಯತ್ನಿದರು. ಇದರಿಂದ ಕೋಪಗೊಂಡ ಆ ವ್ಯಕ್ತಿಯು ಕಿರಿಕ್ ಕೀರ್ತಿಯ ತಲೆಗೆ ಬಿಯರ್ ಬಾಟಲ್‌ನಿಂದ ಹಲ್ಲೆ ಮಾಡಿದ್ದಾನೆ.

ಕಿರುತೆರೆ ನಿರೂಪಕನಾಗಿ ಕಿರಿಕ್​ ಕೀರ್ತಿ ಗುರುತಿಸಿಕೊಂಡಿದ್ದಾರೆ. ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ಆ ನಂತರ ಅವರು ಕೆಲವು ಸಿನಿಮಾಗಳಲ್ಲೂ ನಟಿಸಿದರು. ಸೋಶಿಯಲ್​ ಮೀಡಿಯಾದಲ್ಲೂ ಅವರನ್ನು ಅನೇಕರ ಫಾಲೋ ಮಾಡುತ್ತಾರೆ. ಕಿರಿಕ್​ ಕೀರ್ತಿ ಹೋದಲ್ಲಿ ಬಂದಲ್ಲಿ ಕೆಲವು ಅಭಿಮಾನಿಗಳು ಫೋಟೋಗಾಗಿ ಹಂಬಲಿಸುವುದು ಸಹಜ. ಸದಾಶಿವನಗರದ ಪಬ್​ನಲ್ಲಿ ಫೋಟೋ ತೆಗೆಯಲು ಬಂದು ವ್ಯಕ್ತಿ ಕೂಡ ಕಿರಿಕ್​ ಕೀರ್ತಿಯ ಅಭಿಮಾನಿ ಎನ್ನಲಾಗಿದೆ.

ಕಿರಿಕ್​ ಕೀರ್ತಿ ಮೇಲಿನ ಅಭಿಮಾನಕ್ಕಾಗಿ ಆತ ಫೋಟೋ ಕ್ಲಿಕ್ಕಿಸಿದ್ದಾನೆ. ಆದರೆ ಅದನ್ನು ಕೀರ್ತಿ ಸಹಿಸಿಲ್ಲ. ಫೋಟೋ ತೆಗೆದ ಅಭಿಮಾನಿಯ ವಿರುದ್ಧ ಅವರು ಕೋಪಗೊಂಡು ಮನಬಂದಂತೆ ಮಾತನಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಕಾರಣಕ್ಕಾಗಿ ಆ ವ್ಯಕ್ತಿ ಹಲ್ಲೆ ಮಾಡಿರುವುದು ತಿಳಿದುಬಂದಿದೆ.

ಸದ್ಯ ಗಾಯಗೊಂಡಿರುವ ಕಿರಿಕ್​ ಕೀರ್ತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹಲ್ಲೆ ಮಾಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಘಟನೆ ಸಂಬಂಧ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.