ಸರ್ಕಾರಿ ನೌಕರರು, ವಕೀಲರಿಗೆ 1 ರೂ.ಗೆ ಸಿಗಲಿದೆ ಮನೆ | ಇಲ್ಲಿನ ಸರಕಾರದಿಂದ ಮಹತ್ವದ ಆದೇಶ !

ಸರ್ಕಾರಿ ನೌಕರರು ಹಾಗೂ ವಕೀಲರಿಗೆ 1 ರೂ.ನಲ್ಲಿ ಮನೆಯನ್ನು ಒದಗಿಸಲು ಸರ್ಕಾರ ಮುಂದಾಗಿದೆ.
2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶ ಸರ್ಕಾರ ರಾಜ್ಯದ ಜನತೆಗೆ ಸಿಹಿ ಸುದ್ದಿಯನ್ನು ನೀಡುತ್ತಿದೆ. ಈಗ ಸರ್ಕಾರಿ ನೌಕರರು ಹಾಗೂ ವಕೀಲರೀಗೆ ಈ ಭಾಗ್ಯ ದೊರೆಯಲಿದೆ.

ಯೋಗಿ ಆದಿತ್ಯನಾಥ್ ಸರ್ಕಾರದ ಹೊಸ ಯೋಜನೆಯಡಿ, ಗ್ರೂಪ್ ಸಿ ಮತ್ತು ಡಿ ವರ್ಗದ ಸರ್ಕಾರಿ ನೌಕರರು ಮತ್ತು ವಕೀಲರಿಗೆ ಸಹಾಯಧನದ ಮೇಲೆ ಮನೆಗಳನ್ನು ನೀಡಲು ಮುಂದಾಗಿದೆ.

ಮನೆ ಖರೀದಿಸುವ ಮಂದಿ ಭೂಮಿ ಶುಲ್ಕವಾಗಿ ಕೇವಲ 1 ರೂಪಾಯಿ ನೀಡಬೇಕಾಗುತ್ತದೆ. 1 ರೂ.ಗೆ ಯಾವ ರೀತಿ ಮನೆಗಳನ್ನು ನೀಡಬಹುದು ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳು ಕರಡನ್ನು ತಯಾರಿ ಮಾಡಿ ಇಟ್ಟಿದ್ದು ಅದು ಜಾರಿಗೆ ಬರಬೇಕಿದೆ.
ಈ ಕರಡಿಗೆ ಉನ್ನತ ಮಟ್ಟದಲ್ಲಿ ಅನುಮೋದನೆ ಸಿಕ್ಕಿದ ಬಳಿಕ ಕ್ಯಾಬಿನೆಟ್‍ನಲ್ಲಿ ಒಪ್ಪಿಗೆ ಪಡೆದು ಯೋಜನೆ ಜಾರಿಯಾಗಲಿದೆ ಎಂದು ಮಾಧ್ಯಮವೊಂದು ಅಲ್ಲಿನ ವರದಿ ಮಾಡಿದೆ.

ಖರೀದಿಸಿದ ಮನೆಯನ್ನು 10 ವರ್ಷಗಳವರೆಗೆ ಮಾರಾಟ  ಮಾಡಬಾರದು ಎಂಬ ಷರತ್ತನ್ನು ಇರಲಿದೆ.
ಗ್ರೂಪ್ ಸಿ ಮತ್ತು ಡಿ ವರ್ಗದ ಸರ್ಕಾರಿ ನೌಕರರ ಸಂಬಳ ಕಡಿಮೆಯಿದೆ. ಹಲವರ ಬಳಿ ಮನೆ ಇಲ್ಲದ ಹಿನ್ನೆಲೆಯಲ್ಲಿ ಸರ್ಕಾರ ಚುನಾವಣಾ ಸಮಯದಲ್ಲೇ ಈ ಮಹತ್ವದ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.
ಈ ಯೋಜನೆ ಕುರಿತು ಅಧಿಕಾರಿ ಮತ್ತು ಸರ್ಕಾರದ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು ಇದರಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಜನಪ್ರಿಯತೆ ಮತ್ತಷ್ಟು ಉತ್ತುಂಗಕ್ಕೆ ಏರುವ ನಿರೀಕ್ಷೆಯಿದೆ.. ಶೀಘ್ರವೇ ಕ್ಯಾಬಿನೆಟ್‍ನಲ್ಲಿ ಯೋಜನೆಗೆ ಒಪ್ಪಿಗೆ ಸಿಗುವ ಸಾಧ್ಯತೆಯಿದೆ.

Leave A Reply

Your email address will not be published.