ಬಸ್ಸಿನಲ್ಲಿ ಸೀಟಿಗಾಗಿ ಮಹಿಳೆಯಿಂದ ಯುವಕನ ಮೇಲೆ ಹಲ್ಲೆಗೆ ಯತ್ನ!! ಕಾಲರ್ ಪಟ್ಟಿ ಹಿಡಿದು ಗದರಿಸುತ್ತಿರುವ ವೀಡಿಯೋ ವೈರಲ್-ಮಹಿಳೆಯ ನಡೆಗೆ ನೆಟ್ಟಿಗರಿಂದ ಆಕ್ರೋಶ

Share the Article

ಬಸ್ಸಿನಲ್ಲಿ ಸೀಟಿಗಾಗಿ ಮಹಿಳೆಯೊಬ್ಬಳು ಯುವಕನೊಂದಿಗೆ ತಗಾದೆ ತೆಗೆದು, ಯುವಕನ ಕಾಲರ್ ಪಟ್ಟಿ ಹಿಡಿದ ಘಟನೆಯೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಮಂಗಳೂರಿನದ್ದು ಎನ್ನಲಾದ ವೀಡಿಯೋದಲ್ಲಿ ಬಸ್ ಒಂದರಲ್ಲಿ ಮಹಿಳೆಯರಿಗೆ ಮೀಸಲಿರಿಸಿದ್ದ ಸಿಟಿನಲ್ಲಿ ಯುವಕನೋರ್ವ ಕುಳಿತಿದ್ದು, ಇತರ ಮಹಿಳೆಯರ ಸಹಿತ ಹಲವರು ಸೀಟು ಸಿಗದೇ ನಿಂತಿದ್ದರು. ಇದೇ ವೇಳೆ ಬಸ್ ಹತ್ತಿದ ಮಹಿಳೆಯೊಬ್ಬಳು ಆ ಯುವಕನನ್ನು ಸೀಟ್ ಬಿಟ್ಟುಕೊಡುವಂತೆ ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಆತನ ಮೇಲೆ ಹಲ್ಲೆಗೂ ಮುಂದಾಗಿದ್ದಾಳೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವೀಡಿಯೋ ವೈರಲ್ ಆಗಿದ್ದು, ಮಹಿಳೆಯ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಮಹಿಳೆಯ ಅವಾಜ್ ಹಾಗೂ ತಲೆಹರಟೆಗೆ ಬಗ್ಗಿದ ಯುವಕ ಕೊನೆಗೆ ಉಪಾಯವಿಲ್ಲದೆ ಸೀಟ್ ಬಿಟ್ಟು ಕೊಟ್ಟ. ಇತ್ತ ಆತನ ಪರವಾಗಿದ್ದ ವ್ಯಕ್ತಿಯೊರ್ವ ಸಪ್ಪೆಯಾಗಿ ಬಾಯಿ ಮುಚ್ಚಿ ಕುಳಿತ. ಒಟ್ಟಾರೆಯಾಗಿ ಇಬ್ಬರ ಜಗಳಕ್ಕೆ ಇನ್ನೊಬ್ಬ ಎಂಟ್ರಿಯಾಗಿ ಇಬ್ಬರನ್ನೂ ಸೋಲಿಸಿದೆ ಎಂಬಂತೆ ಮಹಿಳೆ ಇಡೀ ಬಸ್ಸಿನಲ್ಲಿ ರೈಸಿದ್ದೇ ರೈಸಿದ್ದು.

Leave A Reply