ಶಬರಿಮಲೆ ಯಾತ್ರಾರ್ಥಿಗಳಿಗೆ ಸಿಹಿಸುದ್ದಿ | ಭಕ್ತಾದಿಗಳಿಗಾಗಿಯೇ ನಿರ್ಮಾಣವಾಗಿದೆ ‘ಶಬರಿಮಲೆ ಹಬ್’ | ಇಲ್ಲಿದೆ ಈ ಕುರಿತು ಮಾಹಿತಿ

Share the Article

ನವದೆಹಲಿ: ಶಬರಿಮಲೆ ಯಾತ್ರಿಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಹಲವು ಕ್ರಮಗಳನ್ನು ಕೈ ಗೊಂಡಿದ್ದು,ಯಾತ್ರೆಗೆ ತೆರಳಲು ಅನುಕೂಲವಾಗುವ ದೃಷ್ಟಿಯಿಂದ ಕೊಚ್ಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಕೇಂದ್ರ ತೆರೆಯಲಾಗಿದ್ದು,’ಶಬರಿಮಲೆ ಹಬ್’ ನಿರ್ಮಿಸಲಾಗಿದೆ.

ತಿರುವಾಂಕೂರು ದೇವಸ್ವಂ ಮಂಡಳಿ ಪರವಾಗಿ ಧನಲಕ್ಷ್ಮೀ ಬ್ಯಾಂಕ್ ಈ ಕೇಂದ್ರವನ್ನು ನಿರ್ವಹಿಸಲಿದ್ದು,ನೆಯ್ಯಭಿಷೇಕಂ, ಅರವಣ ಮತ್ತು ಅಯ್ಯಪ್ಪ ಪ್ರಸಾದಗಳಿಗೆ ಈ ಕೇಂದ್ರದಿಂದಲೇ ಕೂಪನ್‌ಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಕೇರಳ ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್ ಅವರು ವಿಮಾನ ನಿಲ್ದಾಣದ ಡೊಮೆಸ್ಟಿಕ್ ಟರ್ಮಿನಲ್ ಆವರಣದಲ್ಲಿ ಕೇಂದ್ರವನ್ನು ಉದ್ಘಾಟಿಸಿದ್ದಾರೆ.

ಪ್ರವಾಹ ಮತ್ತು ಭಾರೀ ಮಳೆಯಂತಹ ಪರಿಸ್ಥಿತಿಗಳಿಂದಾಗಿ ಅಯ್ಯಪ್ಪ ಯಾತ್ರಾರ್ಥಿಗಳಿಗೆ ಗರಿಷ್ಠ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಹಿನ್ನೆಲೆಯಲ್ಲಿ ಅಯ್ಯಪ್ಪ ಯಾತ್ರಿಕರಿಗೆ ಅನುಕೂಲವಾಗಲೆಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಬರಿಮಲೆ ಹಬ್ ಅನ್ನು ನಿರ್ಮಿಸಲಾಗಿದೆ.

Leave A Reply