Home Jobs ವರ್ಕ್ ಫ್ರಮ್ ಹೋಮ್ ಎಂಬ ಜಾಹೀರಾತುಗಳನ್ನು ನಂಬಿ ಮೋಸ ಹೋಗಬೇಡಿ !! | ಈ ಖತರ್ನಾಕ್...

ವರ್ಕ್ ಫ್ರಮ್ ಹೋಮ್ ಎಂಬ ಜಾಹೀರಾತುಗಳನ್ನು ನಂಬಿ ಮೋಸ ಹೋಗಬೇಡಿ !! | ಈ ಖತರ್ನಾಕ್ ಗ್ಯಾಂಗೊಂದು ಜನರಿಗೆ ಹೇಗೆ ಮೋಸ ಮಾಡಿದೆ ಎಂಬುದನ್ನು ನೀವೇ ತಿಳಿದುಕೊಳ್ಳಿ

Hindu neighbor gifts plot of land

Hindu neighbour gifts land to Muslim journalist

ನವದೆಹಲಿ:ಅದೆಷ್ಟೋ ಜನ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಎಲ್ಲಿ ಕೆಲಸ ಸಿಗುತ್ತೆ ಎಂಬ ಕಾತುರತೆಯಲ್ಲಿ ಖಾಲಿ ಹುದ್ದೆಗಳ ಮಾಹಿತಿ ಲಭ್ಯವಾಗುತ್ತಿದ್ದಂತೆ ಸಂಪರ್ಕಿಸುವುದು ಸಾಮಾನ್ಯ. ಅದರಲ್ಲೂ ಇಂದು ವರ್ಕ್ ಫ್ರಮ್ ಹೋಮ್ ಗೆ ಹೆಚ್ಚು ಮಹತ್ವತೆಯನ್ನು ನೀಡುತ್ತಾರೆ. ಆದ್ರೆ ಹೀಗೆ ಮನೆಯಲ್ಲೇ ಕೆಲಸ ಮಾಡಿ ಹಣಗಳಿಸಲು ತುದಿಗಾಲಲ್ಲಿ ನಿಂತಿರೋರೆ ಎಚ್ಚರ!ಹೌದು. ಇಂದು ಅದೆಷ್ಟೋ ಉದ್ಯೋಗ ಜಾಹಿರಾತು ಬರುತ್ತಲೇ ಇರುತ್ತವೆ. ಆದ್ರೆ ಇಂತಹ ಮಾಹಿತಿಗಳಲ್ಲೂ ವಂಚಕರಿದ್ದಾರೆ ಜಾಗ್ರತೆ.’ವರ್ಕ್ ಫ್ರಮ್ ಹೋಮ್’ ಎನ್ನುವ ಜಾಹೀರಾತುದಾರರು ನಿಮ್ಮನ್ನು ಹೇಗೆ ತೊಂದರೆಗೆ ಸಿಲುಕಿಸುತ್ತಾರೆ ಎಂಬುದು ಇಲ್ಲಿದೆ ನೋಡಿ.

ದೆಹಲಿ ಪೊಲೀಸರ ವಿಶೇಷ ಕೋಶದ ಐಎಫ್‌ಎಸ್‌ಒ ಘಟಕವು ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ನಡೆಯುತ್ತಿರುವ ನಕಲಿ ಉದ್ಯೋಗ ಕಂಪನಿಗಳನ್ನು ಪತ್ತೆ ಹಚ್ಚಿ ನಾಲ್ವರನ್ನು ಬಂಧಿಸಿದೆ. ಬಂಧಿತ ಜನರು ನಕಲಿ ಜಾಬ್ ಪೋರ್ಟಲ್‌ಗಳ ಮೂಲಕ ಮನೆಯಿಂದಲೇ ಕೆಲಸ ಮಾಡಲು ಪುಸಲಾಯಿಸುತ್ತಿದ್ದರು ಎನ್ನಲಾಗಿದೆ.

ಇದಲ್ಲದೇ ವಾಸ್ತವವಾಗಿ, ವೆಬ್‌ಸೈಟ್ https://theresumesearch.com, https://www.jobsearchnet.in ಮತ್ತು https://resumetofill.com ಗಳಲ್ಲಿ ಅಮಾಯಕರನ್ನು ವಂಚಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸೈಬರ್ ಕ್ರೈಮ್ ಘಟಕದಲ್ಲಿ ಕೆಲವು ದೂರುಗಳು ಬಂದಿರುತ್ತವೆ.ಹೀಗಿರುವಾಗ, ಕೆಲಸಕ್ಕೆ ಸೇರಿಕೊಂಡವರು, ಕೆಲಸ ಮಾಡದೇ ಇದ್ದ ವೇಳೆಯಲ್ಲಿ, ಅವರಿಗೆ ಕಾನೂನಿನ ಬಗ್ಗೆ ಭಯಹುಟ್ಟಿಸುತ್ತಿದ್ದರೆಂಬ ಮಾಹಿತಿ ಹೊರಬಿದ್ದಿದೆ.

ಇದಕ್ಕೆ ಸಂಬಂಧಪಟ್ಟಂತೆ ದೇಶಾದ್ಯಂತ ಇಂತಹ ವಂಚನೆಗಳ 60 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದ್ದು,ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ವಿಚಾರಣೆಯ ಸಮಯದಲ್ಲಿ, ಆರೋಪಿ ಆರ್ ಕುಮಾರ್ ತನ್ನ ಬಳಿ https://theresumesearch.com, https://www.jobsearchnet.in ಮತ್ತು https://resumetofill.com ಇದೆ ಎಂದು ಬಹಿರಂಗಪಡಿಸಿದ್ದಾನೆ.