Home latest ಮೃತ ಅಜ್ಜಿಯ ಹೆಬ್ಬೆಟ್ಟಿನ ಮೇಲೆ ಶಾಯಿ ಹಾಕಿ ಖಾಲಿ ಪೇಪರ್ ಮೇಲೆ ಮುದ್ರೆ ಒತ್ತಿಸಿಕೊಂಡ ಸಂಬಂಧಿಕರು!...

ಮೃತ ಅಜ್ಜಿಯ ಹೆಬ್ಬೆಟ್ಟಿನ ಮೇಲೆ ಶಾಯಿ ಹಾಕಿ ಖಾಲಿ ಪೇಪರ್ ಮೇಲೆ ಮುದ್ರೆ ಒತ್ತಿಸಿಕೊಂಡ ಸಂಬಂಧಿಕರು! ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಮೈಸೂರು: ಖಾಲಿ ಪತ್ರಕ್ಕೆ ಮೃತ ಅಜ್ಜಿಯ ಹೆಬ್ಬೆಟ್ಟು ಒತ್ತಿಸಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಇದರ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ ಎನ್ನಲಾಗಿದೆ. ಆಲ್ಲಿ ವೃದ್ದೆಯೊಬ್ಬರು ಮೃತಪಟ್ಟಿದ್ದರು. ಆ ಅಜ್ಜಿಗೆ ಇಬ್ಬರು ಅಕ್ಕಂದಿರು ಮತ್ತು ಓರ್ವ ತಮ್ಮ ಇದ್ದಾರೆ. ಆಕಿಗೆ ಗಂಡನಾಗಲೀ ಮಕ್ಕಳಾಗಲಿ ಇಲ್ಲ. ಅಜ್ಜಿಗೆ ಒಟ್ಟು 14 ಎಕರೆ ಆಸ್ತಿಪಾಸ್ತಿ ಇದೆ. ಇದೀಗ ಅಜ್ಜಿ ತೀರಿಕೊಂಡಾಗ ಆಸ್ತಿಯ ಆಸೆಯಿಂದ ಸಂಬಂಧಿಕರು ಮೃತ ಅಜ್ಜಿಯ ಹೆಬ್ಬೆಟ್ಟಿಗೆ ಷಾಯಿ ಹಾಕಿ ಖಾಲಿ ಪೇಪರಿನ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಂಡಿದ್ದಾರೆ.

ಆದರೆ ಈ ಸನ್ನಿವೇಶವನ್ನು ಮಹಿಳೆಯೊಬ್ಬರು ಪ್ರಶ್ನಿಸುತ್ತಾ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಹೆಬ್ಬೆಟ್ಟಿನ ಗುರುತಿರುವ ಪತ್ರಗಳನ್ನ ಪಡೆಯಲು ಮಹಿಳೆ ಯತ್ನಿಸಿದ್ದಾರೆ. ಆದರೆ ಇದಕ್ಕೆ ಸ್ಪಂದಿಸದ ಸಂಬಂಧಿಕರು ಖಾಲಿ ಪತ್ರಗಳನ್ನು ಪಕ್ಕದಲ್ಲೇ ಇರುವ ತಮ್ಮ ಮನೆಗೆ ರವಾನಿಸಿದ್ದಾರೆ. ಅಲ್ಲದೆ ಇದು ತಪ್ಪು ಎಂದು ವಿರೋಧಿಸಿದ ಮಹಿಳೆಯ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹಾಗೆ ಹೆಬ್ಬೆಟ್ಟು ಒತ್ತಿಸಿಕೊಂಡವರು ಅವರು ಅಜ್ಜಿಯ ಅಕ್ಕನ ಮಗ ಎನ್ನಲಾಗಿದೆ. ನಾನೇ ಅಜ್ಜಿಯನ್ನು ಕಡೆಗಾಲದಲ್ಲಿ ನೋಡಿಕೊಂಡದ್ದು. ಆಸ್ತಿ ನನಗೆ ಸಲ್ಲಬೇಕು ಎನ್ನುವುದು ಆತನ ವಾದ. ಆದರೆ ಮೃತ ಅಜ್ಜಿಯ ಹೆಬ್ಬೆಟ್ಟಿಗೆ ನಿಂದ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಉಳಿದ ಸಂಬಂಧಿಕರ ಪ್ರಶ್ನೆ.