Home latest ಮುಲ್ಕಿ: ಪೊಲೀಸರು ಬಂಧಿಸಿ ಸೆಲ್ ನಲ್ಲಿರಿಸಿದ್ದ ಕಳ್ಳ ಸಂಜೆಯಾಗುತ್ತಲೇ ಠಾಣೆಯಿಂದ ಪರಾರಿ!!ಪೊಲೀಸರಾ ನಿರ್ಲಕ್ಷ್ಯಕ್ಕೆ ಬೆಚ್ಚಿಬಿದ್ದ ಸ್ಥಳೀಯರು

ಮುಲ್ಕಿ: ಪೊಲೀಸರು ಬಂಧಿಸಿ ಸೆಲ್ ನಲ್ಲಿರಿಸಿದ್ದ ಕಳ್ಳ ಸಂಜೆಯಾಗುತ್ತಲೇ ಠಾಣೆಯಿಂದ ಪರಾರಿ!!ಪೊಲೀಸರಾ ನಿರ್ಲಕ್ಷ್ಯಕ್ಕೆ ಬೆಚ್ಚಿಬಿದ್ದ ಸ್ಥಳೀಯರು

Hindu neighbor gifts plot of land

Hindu neighbour gifts land to Muslim journalist

ಮುಲ್ಕಿ: ಹೊಸ ಪೊಲೀಸ್ ಠಾಣೆ ಇದ್ದರೂ ಕಳ್ಳನೊಬ್ಬನನ್ನು ಹಳೇ ಪೊಲೀಸ್ ಠಾಣೆಯ ಸೆಲ್ ನಲ್ಲಿ ಕೈಗೆ ಕೋಳವಿಲ್ಲದೆ ಹಾಕಿ, ನಡುರಾತ್ರಿ ಆತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಠಾಣೆಯಿಂದ ಪರಾರಿಯಾದ ಘಟನೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಘಟನೆ ವಿವರ: ಕಳೆದ ಐದು ದಿನಗಳ ಹಿಂದೆ ಬಂಧಿತನಾಗಿದ್ದ ಕಳ್ಳನೋರ್ವನನ್ನು ಮುಲ್ಕಿ ಪೊಲೀಸರು ಹಳೇ ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿದ್ದರು. ಆದರೆ ನಿನ್ನೆ ಸಂಜೆ ವೇಳೆಗೆ ಪೊಲೀಸರ ಕಣ್ತಪ್ಪಿಸಿ ಓಡಿದ ಕಳ್ಳನನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಉಡುಪಿ ಮೂಲದವನಾದ ಆರೋಪಿ ತಪ್ಪಿಸಿಕೊಂಡು ಸಾರ್ವಜನಿಕರ ಕೈಗೂ ಸಿಗದೆ ತೋಡೊಂದಕ್ಕೆ ಹಾರಿ ಆ ಬಳಿಕ ತೋಟವೊಂದರಲ್ಲಿ ಕಣ್ಮರೆಯಾಗಿದ್ದಾನೆ. ಸುಮಾರು 36 ರಿಂದ 40 ವರ್ಷದವನ್ನಾಗಿದ್ದು, ಕಪ್ಪು ಪ್ಯಾಂಟ್ ಮತ್ತು ಕಪ್ಪು ಶರ್ಟ್ ಧರಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆಯಾಗಿ ಕಳ್ಳನನ್ನು ಬಂಧಿಸಿದ್ದ ಪೊಲೀಸರೇ ತಮ್ಮ ಕರ್ತವ್ಯ ಲೋಪ ಎಸಗಿರುವುದು, ತಮ್ಮ ನಿರ್ಲಕ್ಷದಿಂದಾಗಿ ಈ ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇತ್ತ ಪ್ರದೇಶದ ಮನೆಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.