ಮುಂದಿನ ದಿನಗಳಲ್ಲಿ ಪುನೀತ್ ರಾಜಕುಮಾರ್ ನಟಿಸಬೇಕಿದ್ದ ಸಿನಿಮಾಗಳಿಗೆ ನಾಯಕ ಯಾರು!!? ಅಪ್ಪು ಸ್ಥಾನವನ್ನು ತುಂಬಲಿರುವ ಏಕೈಕ ನಾಯಕನ ಆಯ್ಕೆಗೆ ಮುಂದಾದ ನಿರ್ದೇಶಕ

Share the Article

ವಿಧಿಯ ಕರೆಗೆ ಓಗೊಟ್ಟು ಸಾಗರದಷ್ಟು ವಿಶಾಲ ಅಭಿಮಾನಿ ಬಳಗವನ್ನು ಬಿಟ್ಟು ಅಗಲಿದ ಕನ್ನಡದ ಖ್ಯಾತ ಯುವನಟ ಪುನೀತ್ ರಾಜ್ ಕುಮಾರ್ ಅವರು ನಟಿಸಬೇಕಿದ್ದ ಹಲವಾರು ಚಿತ್ರಗಳಿಗೆ ಮುಂದೆ ನಟ ಯಾರು ಎಂಬ ಪ್ರಶ್ನೆಯೊಂದು ಎದ್ದಿದ್ದು, ಈ ನಡುವೆ ಮುಂದಿನ ನಟ ಯಾರಾಗಬಹುದೆಂಬ ಆಯ್ಕೆಯೂ ನಡೆದಿದೆ.

ಮುಂಬರುವ ದಿನಗಳಲ್ಲಿ ಪುನೀತ್ ನಟಸಲಿದ್ದ ಆ ಒಂದು ಸಿನಿಮಾದ ನಿರ್ದೇಶಕರೊಬ್ಬರು ಪುನೀತ್ ಜೊತೆಗೆ ಈ ಮೊದಲೇ ಸ್ಕ್ರಿಪ್ಟ್ ಹೇಳಿ ಒಪ್ಪಂದ ಮಾಡಿಕೊಂಡಿದ್ದರು.ಇದಾದ ಬಳಿಕ ಪುನೀತ್ ಅಕಾಲಿಕ ಮರಣವು ಇಡೀ ಸಿನಿಮಾ ರಂಗಕ್ಕೆ ಮಾತ್ರವಲ್ಲದೇ ಕರುನಾಡಿಗೆ ಅರಗಿಸಿಕೊಳ್ಳಲಾಗದ ನೋವಾಗಿ ಕಾಡಿತ್ತು.

ಸದ್ಯ ಮುಂಬರುವ ದಿನಗಳಲ್ಲಿ ಪುನೀತ್ ನಟಿಸಬೇಕಿದ್ದ ಸಿನಿಮಾಗಲ್ಲಿ ನಟ ಯುವರಾಜ್ ಕುಮಾರ್ ಅವರೇ ನಟಿಸಬೇಕು ಎಂಬ ಮಾತು ಕೇಳಿ ಬಂದಿದೆ. ಪುನೀತ್ ಅವರಿಗೆ ಸರಿಸಾಟಿಯಾಗುವ,ಪುನೀತ್ ಸ್ಥಾನವನ್ನು ಅಚ್ಚಳಿಯದೆ ಉಳಿಸುವ ಏಕೈಕ ನಾಯಕನಾಗುವ ಎಲ್ಲಾ ಅರ್ಹತೆಗಳು ಯುವರಾಜ್ ಗೆ ಇದ್ದು ಇದೆಲ್ಲ ಕಾರಣದಿಂದಾಗಿ ಯುವರಾಜ್ ಕುಮಾರ್ ಅವರು ನಟಿಸಬೇಕು ಎಂಬುವುದು ಎಲ್ಲರ ಬಯಕೆಯಾಗಿದೆ.

Leave A Reply