Home latest ಕಿರುಕುಳ ತಾಳಲಾರದೇ ಮಾಜಿ ಲವರ್ ನ ಹೊಡೆಯಲು ಯುವಕರನ್ನು ಕಳುಹಿಸಿದ ಯುವತಿ!! ಗುಂಪುಕಟ್ಟಿ ಬಂದಿದ್ದ ಯುವಕರು...

ಕಿರುಕುಳ ತಾಳಲಾರದೇ ಮಾಜಿ ಲವರ್ ನ ಹೊಡೆಯಲು ಯುವಕರನ್ನು ಕಳುಹಿಸಿದ ಯುವತಿ!! ಗುಂಪುಕಟ್ಟಿ ಬಂದಿದ್ದ ಯುವಕರು ಹೊಡೆದದ್ದು ಯಾರಿಗೆ ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು:ಇಲ್ಲಿನ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳಿಂದ ಅಮಾಯಕ ಯುವಕನೊಬ್ಬನ ಮೇಲೆ ದಾಳಿ ನಡೆದಿದ್ದು,’ಯಾರಿಗೋ ಇಟ್ಟ ಗುರಿಗೆ ಇನ್ನ್ಯಾರೋ ಬಲಿಯಾದರು ‘ ಎಂಬ ಮಾತಿನಂತೆ ಘಟನೆಯಲ್ಲಿ ಯುವಕನಿಗೆ ಹಲ್ಲೆ ನಡೆಸಲಾಗಿದ್ದು ಸದ್ಯ ಪ್ರಕರಣ ಠಾಣೆ ಮೆಟ್ಟಿಲೇದ್ದರಿಂದ ಪ್ರಕರಣದ ಸತ್ಯಾ ಸತ್ಯತೆ ಬಯಲಾಗಿದೆ.

ಘಟನೆ ವಿವರ: ಇಲ್ಲಿನ ಬೇಕರಿಯೊಂದರಲ್ಲಿ ಕೆಲಸಮಾಡುತ್ತಿದ್ದ ಸಂತೋಷ್ ಎನ್ನುವ ಯುವಕನೋರ್ವ ಯುವತಿಯೊರ್ವಳನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ.ಯುವತಿಯು ಕೂಡಾ ಆತನನ್ನು ಪ್ರೀತಿಸುತ್ತಿದ್ದಳು.ಆದರೆ ಕೆಲ ಸಮಯದ ಹಿಂದೆ ಇವರಿಬ್ಬರ ಲವ್ ಮುರಿದುಬಿದ್ದಿತ್ತು. ಇದರಿಂದ ಬೇಸರಗೊಂಡ ಯುವಕ ಆಕೆಗೆ ಪದೇ ಪದೇ ಕರೆಮಾಡಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಈತನ ಕಿರುಕುಳ ತಾಳಲಾರದೇ ಯುವತಿಯು ತನ್ನ ಸ್ನೇಹಿತರಲ್ಲಿ ವಿಚಾರ ತಿಳಿಸಿದ್ದು ಆತನನ್ನು ಗದರಿಸಲು ಹೇಳಿದ್ದಳು. ಆದರೆ ಆಕೆಯ ಸ್ನೇಹಿತರು ರಾತ್ರಿ ಹೊತ್ತಿನಲ್ಲಿ ಸಂತೋಷ್ ತಂಗಿದ್ದ ರೂಮ್ ಗೆ ಬಂದಿದ್ದು,ಈ ವೇಳೆ ಸಂತೋಷ್ ರೂಮ್ ನಲ್ಲಿ ಇರಲಿಲ್ಲ. ಆದರೆ ಸಂತೋಷ್ ಎಂದು ಇನ್ನೊರ್ವ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ್ದು ಸದ್ಯ ಯುವಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾನೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.