ಧಾವಿಸುತ್ತಿರುವ ರೈಲಿಗೆ ಬೆನ್ನುಹಾಕಿ ನಿಂತು ವಿಡಿಯೋ ತೆಗೆಯುವ ಹುಚ್ಚು | ರೈಲಿಗೆ ಸಿಲುಕಿ ಯುವಕ ಸಾವು, ವೈರಲ್ ಆಗಿದೆ ಆ ಭಯಾನಕ ವೀಡಿಯೋ !!
ಹೋಶಂಗಾಬಾದ್: ಸೆಲ್ಫಿ ಮತ್ತು ಫೋಟೋ ತೆಗೆಯುವ ಹವ್ಯಾಸ ಯುವಕನೊಬ್ಬನನ್ನು ಬಲಿತೆಗೆದುಕೊಂಡಿದೆ. ಅಪಾಯಕಾರಿ ಸಂದರ್ಭಗಳಲ್ಲಿ ಸೆಲ್ಫಿ ತೆಗೆದುಕೊಂಡು ಹಲವು ಜೀವಗಳು ಬಲಿಯಾಗುತ್ತಿರುವ ಸಂಗತಿ ದಿನ ನಿತ್ಯ ನಡೆಯುತ್ತಿದ್ದರೂ ಮತ್ತೆ ಜನ ಬುದ್ದಿ ಕಲಿಯುತ್ತಿಲ್ಲ.
ಮಧ್ಯಪ್ರದೇಶದ ಹೋಶಂಗಾಬಾದ್ ನಲ್ಲಿ ಭಾನುವಾರ ಭೀಕರ ಅಪಘಾತ ನಡೆದಿದ್ದು ಇಟಾರ್ಸಿಯ ಯುವಕನೊಬ್ಬ ರೈಲ್ವೆ ಹಳಿ ಬಳಿ ವಿಡಿಯೋ ಮಾಡುತ್ತಿರುವಾಗ ರೈಲು ಹೊಡೆದ ಹೊಡೆತಕ್ಕೆ ಆತ ಕೊಚ್ಚಿ ಹೋಗಿದ್ದಾನೆ.
ಇದೀಗ ಯುವಕನಿಗೆ ರೈಲು ಡಿಕ್ಕಿ ಹೊಡೆಯುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಸಂಜು ಚೌರೆ ಎಂಬ 22 ವರ್ಷದ ಯುವಕ ತನ್ನ ಸ್ನೇಹಿತನೊಂದಿಗೆ ಅಲ್ಲಿನ ಇಟಾರ್ಸಿಯ ಶರದ್ದೇವರ ದೇವಾಲಯಕ್ಕೆ ಬಂದಿದ್ದನು. ಶರದ್ದೇವರ ದೇಗುಲಕ್ಕೆ ತೆರಳಿದ ಬಳಿಕ ರೈಲ್ವೆ ಹಳಿ ಬಳಿ ಇಬ್ಬರೂ ಯುವಕರು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದರು. ಈ ವೇಳೆ ರೈಲಿಗೆ ಬೆನ್ನು ಹಾಕಿ ನಿಂತ ಸಂಜು ಹಳಿಯ ಪಟ್ಟಿಯ ಪಕ್ಕ ನಿಂತು ಗೆಳೆಯನಿಗೆ ವೀಡಿಯೋ ತೆಗೆಯಲು ಹೇಳಿದ್ದಾನೆ. ರೈಲಿನ ಬಾಡಿ ಪಟ್ಟಿಯ ಹೊರಗೂ ಇದೆ ಎಂಬ ಅಂದಾಜು ಇಲ್ಲದ ಆತ ಮೊಬೈಲಿಗೆ ಫೋಸ್ ಕೊಡುವ ಸಂದರ್ಭದಲ್ಲಿ ರೈಲು ಮುನ್ನುಗ್ಗಿ ಬಂದಿದೆ. ಸ್ನೇಹಿತ ಕೂಡ ಪಕ್ಕಕ್ಕೆ ಸರಿದು ಕೊಳ್ಳಲು ಹೇಳಿದ್ದಾನೆ. ಆದರೆ ಕಾಲ ಮಿಂಚಿದೆ.
ರೈಲು ಒಂದೇ ಸಮನೆ ಹಾರನ್ ಹೊಡೆಯುತ್ತಿದ್ದರು ಕೂಡ ಲೆಕ್ಕಿಸದ ಯುವಕನನ್ನು ಎತ್ತಿ ಒಗೆದು ಮುಂದೆ ಸಾಗಿದೆ ರೈಲು. ಹಳಿಗಳ ಮದ್ಯೆಯೆ ಸಿಲುಕಿ ಸಂಜು ತಕ್ಷಣ ಸಾವಿಗೀಡಾಗಿದ್ದಾನೆ.
ಇಂದು ಸೋಮವಾರ ಬೆಳಗ್ಗೆ ಶವದ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಮೃತ ಸಂಜು ಚೌರೆ ಅವರ ಸ್ನೇಹಿತನನ್ನು ಪೋಲೀಸರು ವಿಚಾರಣೆ ನಡೆಸಿ, ಹೇಳಿಕೆ ಪಡೆದಿದ್ದಾರೆ. ಅಸುರಕ್ಷಿತ ಸ್ಥಳಗಳಲ್ಲಿ ಫೋಟೋ ತೆಗೆದುಕೊಳ್ಳುವ ಹುಚ್ಚಿಗೆ ಯುವಕ ವಿನಾಕಾರಣ ಬಲಿಯಾಗ ಬೇಕಾದದ್ದು ವಿಪರ್ಯಾಸ.
ವೈರಲ್ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
https://twitter.com/i/status/1462786362956914688