Home Karnataka State Politics Updates ಬಹುಕಾಲದ ನಂತರ ಹಳ್ಳಿ ಹೈದನ ಬಾಯಿಂದ ಉದುರಿತು ಬಹುವಚನ!!|ಮಾತಿನದ್ದಕ್ಕೂ ಏಕವಚನ ಉಪಯೋಗಿಸುತ್ತಿದ್ದ ಸಿದ್ದರಾಮಯ್ಯಗೆ ಇಂದೇನಾಯಿತು?!!

ಬಹುಕಾಲದ ನಂತರ ಹಳ್ಳಿ ಹೈದನ ಬಾಯಿಂದ ಉದುರಿತು ಬಹುವಚನ!!|ಮಾತಿನದ್ದಕ್ಕೂ ಏಕವಚನ ಉಪಯೋಗಿಸುತ್ತಿದ್ದ ಸಿದ್ದರಾಮಯ್ಯಗೆ ಇಂದೇನಾಯಿತು?!!

Hindu neighbor gifts plot of land

Hindu neighbour gifts land to Muslim journalist

ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಸಭಾ ವೇದಿಕೆಯೊಂದರಲ್ಲಿ ಫುಲ್ ಡಿಫರೆಂಟ್ ಆಗಿದ್ದರು.ಈ ವರೆಗೂ ಹಲವಾರು ಭಾಷಣಗಳಲ್ಲಿ ನಾಯಕರುಗಳನ್ನು ಏಕವಚನದಲ್ಲಿ ಸಂಬೋಧಿಸುತ್ತಿದ್ದ ಪ್ರತಿಪಕ್ಷ ನಾಯಕ ಇಂದು ತುಮಕೂರಿನಲ್ಲಿ ನಡೆದ ಜನಜಾಗೃತಿ ಅಭಿಯಾನವೊಂದರ ಭಾಷಣದಲ್ಲಿ ಮೋದಿ ಸಹಿತ ಹಲವರನ್ನು ಬಹುವಚನದಲ್ಲಿ ಮಾತನಾಡಿ ಎಲ್ಲರಿಂದಲೂ ಮೆಚ್ಚುಗೆಗಳಿಸಿಕೊಂಡಿದ್ದಾರೆ.

ಮಾತಿನುದ್ದಕ್ಕೂ ತಾನು ಹಳ್ಳಿಹೈದ, ನನ್ನ ಮಾತಿನಲ್ಲಿ ಏಕವಚನಗಳೇ ತುಂಬಿದೆ ಎಂದೆಲ್ಲಾ ಸಾಬೂಬು ಹೇಳುತ್ತಿದ್ದ ಸಿದ್ದು ಇಂದಿನ ಭಾಷಣದಲ್ಲಿ ಬಹುವಚನ ಉಪಯೋಗಿಸಿದ ಪರಿ ಕಂಡು ವೇದಿಕೇತರ ಗಣ್ಯರು ಅಚ್ಚರಿಯಾಗಿದ್ದರು. ಮೋದಿಯವರೇ, ಕರಂದ್ಲಾಜೆ ಜೀ ಅಮಿತ್ ಶಾ ಜೀ ಎಂದೆಲ್ಲಾ ಸಂಭೋಧಿಸಿದ ಸಿದ್ದು ಮಾತಿನ ಶೈಲಿ ಎಂದಿಗಿಂತಲೂ ಇಂದು ಕೊಂಚ ಭಿನ್ನವಾಗಿತ್ತು.

ಅನೇಕ ಸಭೆ ಸಮಾರಂಭಗಳಲ್ಲಿ ಮೋದಿ ಬಗ್ಗೆ ಸಿದ್ದು ಕಿಡಿಕಾರಿ ಮಾತನಾಡುವಾಗ ವೇದಿಕೆಯ ಕೆಳಗಿನಿಂದ ಸಿಳ್ಳೆ, ಚಪ್ಪಾಳೆಯ ಮೂಲಕ ಖುಷಿ ವ್ಯಕ್ತಪಡಿಸುತ್ತಿದ್ದ ಹಲವಾರು ಕಾರ್ಯಕರ್ತರು ಇಂದು ಸಿದ್ದು ಮಾತಿನ ಶೈಲಿ ಕಂಡು ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆಯಾದರೂ, ಸಿದ್ದರಾಮಯ್ಯ ಮಾತ್ರ ಬಹುವಚನ ಉಪಯೋಗಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.