Toxic : ಟಾಕ್ಸಿಕ್ ಚಿತ್ರದ ಹೀರೋಯಿನ್ ಅನೌನ್ಸ್- ಹೇಗಿದೆ ಗೊತ್ತಾ ಕಿಯಾರ ಫಸ್ಟ್ ಲುಕ್?


Toxic : ಇಡೀ ಕನ್ನಡ ನಾಡಿನ ಜನತೆಗೆ ಕಾದು ಕುಳಿತಿರುವ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರದ ಮೊದಲ ಹೀರೋಯಿನ್ ಯಾರೆಂದು ಅನೌನ್ಸ್ ಆಗಿದೆ. ಇದರಲ್ಲಿ ಖ್ಯಾತ ನಟಿ ಕಿಯಾರ ಅವರ ಫಸ್ಟ್ ಲುಕ್ ಬಾರಿ ಕುತೂಹಲವನ್ನು ಕೆರಳಿಸಿದೆ.

ಟಾಕ್ಸಿಕ್ ಚಿತ್ರದಲ್ಲಿ ಹೆಚ್ಚಾಗಿ ನಟಿಯರದ್ದೇ ಅಬ್ಬರ ಎಂಬ ಮಾತೂ ಸಹ ಕೇಳಿಬರುತ್ತಿತ್ತು. ಆದರೆ ಯಾರೆಲ್ಲಾ ನಟಿಯರು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಇಂದು ಟಾಕ್ಸಿಕ್ ಚಿತ್ರತಂಡವೇ ಅಧಿಕೃತವಾಗಿ ಮೊದಲ ನಟಿಯನ್ನು ಪರಿಚಿಯಿಸಿದ್ದು, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಟಾಕ್ಸಿಕ್ನಲ್ಲಿ ನಟಿಸಿರುವುದು ಪಕ್ಕಾ ಆಗಿದೆ. ಅಲ್ಲದೇ ಕಿಯಾರಾ ಅಡ್ವಾಣಿ ಟಾಕ್ಸಿಕ್ನಲ್ಲಿ ನಾಡಿಯಾ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಚಿತ್ರತಂಡವೇ ವಿಶೇಷ ಫೋಸ್ಟರ್ ಮೂಲಕ ತಿಳಿಸಿದೆ.
ಈ ಪೋಸ್ಟರ್ನಲ್ಲಿ ಕಿಯಾರಾ ಅಡ್ವಾಣಿಯ ಪಾತ್ರವು ಸರ್ಕಸ್ ಹಿನ್ನೆಲೆಯಲ್ಲಿ ಕಾಣಿಸಿಕೊಂಡಿದೆ. ಆಕರ್ಷಕ ವಸ್ತ್ರದೊಂದಿಗೆ ವಿಭಿನ್ನ ರೀತಿಯ ಮೇಕಪ್ ಅವರ ಪಾತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕಿಯಾರಾ ಮುಖದಲ್ಲಿ ಭಾವನಾತ್ಮಕ ದುಃಖ ಸೂಚಿಸುತ್ತಿದೆ. ಅಲ್ಲದೇ ಪೋಸ್ಟರ್ನಲ್ಲಿ ಕಿಯಾರಾ ಸುತ್ತಲೂ ಜೋಕರ್ಗಳು ಕುಣಿಯುತ್ತಿರುವ ದೃಶ್ಯವಿದ್ದು, ಟಾಕ್ಸಿಕ್ ಚಿತ್ರದಲ್ಲಿ ಜೋಕರ್ ಪಾತ್ರದ ಬಗ್ಗೆ ಪದೇ ಪದೇ ಚರ್ಚೆಗೆ ಇದು ಇನ್ನಷ್ಟು ಪುಷ್ಠಿ ನೀಡಿದೆ.

Comments are closed.