Vijayapura : ಯಾರಿಗೆ ಬೇಕಾದ್ರೂ ಕಂಪ್ಲೇಂಟ್ ಮಾಡಿ, ನಿಮ್ಮನ್ನು ಬಿಡಲ್ಲ – ಬಿಜೆಪಿ MLC ಯನ್ನು ಒಂದು ಗಂಟೆ ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ

Share the Article

Vijayapura : “ನೀವು ಯಾರಿಗೆ ಬೇಕಾದರೂ ಕಂಪ್ಲೆಂಟ್ ಮಾಡಿ, ನಿಮ್ಮನ್ನಂತು ಬಿಡುವುದಿಲ್ಲ” ಎಂದು ಟೋಲ್ ಸಿಬ್ಬಂದಿಗಳು ಬಿಜೆಪಿ ಎಂಎಲ್‌ಸಿಯನ್ನು 1 ಗಂಟೆ ತಡೆದು ನಿಲ್ಲಿಸಿದ್ದ ಘಟನೆ ನಡೆದಿದೆ

ಹೌದು, ಸೋಲಾಪುರ- ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 50 ರಲ್ಲಿರುವ ಹಿಟ್ನಳ್ಳಿ ಟೋಲ್‌ ನಾಕಾದಲ್ಲಿ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಕೇಶವ ಪ್ರಸಾದ್‌ ಅವರನ್ನು ಟೋಲ್‌ ಸಿಬ್ಬಂದಿ ಪಾಸ್‌ ಇದ್ದರೂ ಕಾರನ್ನು ಬಿಡದೇ ಸುಮಾರು ಒಂದು ಗಂಟೆ ಕಾಯಿಸಿರುವ ಪ್ರಸಂಗ ಭಾನುವಾರ ನಡೆದಿದೆ.

ಪರಿಸ್ಥಿತಿ ಸರಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಶವ ಪ್ರಸಾದ್ ಅವರು “ವಿಜಯಪುರದಲ್ಲಿ ಸೋಮವಾರ ನಡೆಯುವ ಕೆಡಿಪಿ ಸಭೆಯಲ್ಲಿ ಭಾಗವಹಿಸಲು ಸರ್ಕಾರಿ ಪಾಸ್‌ ಇರುವ ಕಾರಿನಲ್ಲಿ ಬರುವಾಗ ಟೋಲ್‌ ಸಿಬ್ಬಂದಿ ತಡೆದರು. ನೀವು ಎಂಎಲ್‌ಸಿನಾ? ನಿಮ್ಮ ಗುರುತಿನ ಚೀಟಿ ತೋರಿಸಿ? ಎಂದು ನನ್ನ ಪಾಸ್‌ ಕಿತ್ತುಕೊಂಡರು, ಜೊತೆಗೆ ನನ್ನ ಆಪ್ತ ಸಹಾಯಕನ ಫೋನ್‌ ಕಿತ್ತುಕೊಂಡರು, ಯಾರಿಗೆ ಬೇಕಾದರೂ ದೂರು ನೀಡಿ, ನಿಮ್ಮನ್ನು ಬಿಡುವುದಿಲ್ಲ ಎಂದು ಉದ್ಧಟತನದಿಂದ ವರ್ತಿಸಿದರು. ಪ್ರಕರಣದ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ ಬಳಿಕ ಸಂಬಂಧಪಟ್ಟ ಅಧಿಕಾರಿ ಒಂದು ಗಂಟೆ ನಂತರ ಬಂದು ಕ್ಷಮೆ ಕೇಳಿ ಬಿಟ್ಟರು” ಎಂದು ಬೇಸರ ವ್ಯಕ್ತಪಡಿಸಿದರು.

Comments are closed.