Toll Fate: ನಿಂತಲ್ಲೇ ನಿಂತಿದ್ರೂ ಟೋಲ್ ಶುಲ್ಕ ಕಟ್: ಹೇಗೆ ಸಾಧ್ಯ?

Share the Article

Toll Fate: ಹೈವೇಗಳಲ್ಲಿ ಟೋಲ್ ಗೇಟ್ (Toll Fate) ಪಾಸ್ ಆಗಲು ಕ್ಯಾಶ್ ಲೇಸ್ ಫಾಸ್ಟ್ ಟ್ಯಾಗ್ ಬಂದು ಅನೇಕ ವರ್ಷಗಳೇ ಆಗಿದೆ. ಆದ್ರೆ ಮನೆಯಲ್ಲೇ ಇದ್ರೂ ಫಾಸ್ಟ್ ಟ್ಯಾಗ್ (Fast Tag) ಹಣ ಕಟ್ ಆಗ್ತಿದೆ.

ಹೌದು. ಬೆಂಗಳೂರು ಸಂಜಯನಗರದ ನಿವಾಸಿ ಕಿರಿಣ್ ಮೂರ್ತಿ ಕಳೆದ 8 ವರ್ಷಗಳಿಂದ ಇನ್ನೋವಾ ಕಾರ್ ಹೊಂದಿದ್ದಾರೆ. ಕಾರು ಮನೆಯಲ್ಲೇ ಇದ್ರೂ ಇವ್ರಿಗೆ ಟೋಲ್ ಪಾಸ್ ಆಗಿದೆ ಅಂತಾ ಕಳೆದ ಎರಡುವರೆ ವರ್ಷಗಳಿಂದ ಹಣ ಕಟ್ ಆಗ್ತಾನೆ ಇದೆ. ಈ ಸಂಬಂಧ ದೂರು ನೀಡಿದ್ರೂ, ಬ್ಯಾಂಕ್ ಗಮನಕ್ಕೆ ತಂದು ಕಟ್ ಆದ ಹಣ ಕೂಡ ಆಗಾಗ ವಾಪಸ್ ಪಡೆದ್ದಾರೆ. ಆದ್ರೇ ಈ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ಬೇಕು ಅಂತ ಮೊನ್ನೆಯಷ್ಟೇ ಹೊಸ ಫಾಸ್ಟ್ ಟ್ಯಾಗ್ ಆಕ್ಟಿವೇಟ್ ಮಾಡಿದ್ದಾರೆ. ಹೊಸ ಫಾಸ್ಟ್ ಟ್ಯಾಗ್ ಆಕ್ಟೀವೇಟ್ ಆದ ಕೆಲವೇ ಗಂಟೆಗಳಲ್ಲಿ ಮತ್ತೆ ತಮ್ಮ ಕಾರು ಆಂಧ್ರದ ಟೋಲ್ ಪಾಸ್ ಆಗಿದೆ ಅಂತ ಮತ್ತೆ ಹಣ ಕಟ್ ಆಗಿದೆ.

ಈ ಬಗ್ಗೆ ಬ್ಯಾಂಕ್‌ಗೆ ದೂರು ನೀಡಿದ್ದಾರೆ, ಅಷ್ಟೇ ಅಲ್ಲ ಟೋಲ್ ಹೆಲ್ಪ್‌ಲೈನ್‌ಗೂ ಕರೆ ಮಾಡಿಮಾಡಿ ಸಾಕಾಗಿದ್ದಾರೆ. ತಮ್ಮ ಕಾರ್ ನಂಬರ್‌ನ ಬೇರೆ ಯಾರಾದ್ರೂ ಫೇಕ್‌ಮಾಡಿ ಬಳಸ್ತಿದ್ದಾರೆ ಅನ್ನೋ ಆತಂಕಕೂಡ ಇವ್ರಿಗಿದೆ. ಯಾವುದಾದ್ರೂ ಕ್ರೈಮ್‌ಗೆ ನನ್ನ ಗಾಡಿ ನಂಬರ್ ಬಳಿಸಿಕೊಂಡ್ರೇ ಹೇಗೆ ಅಂತಾ ಅನುಮಾನ ಕೂಡ ವ್ಯಕ್ತಪಡಿಸಿದ್ದಾರೆ. ಯಾರಿಗೆ ದೂರು ನೀಡಿದ್ರು ಇಲ್ಲಿವರೆಗೆ ಯಾವುದೇ ಪ್ರಯೋಜನ ಆಗ್ತಿಲ್ಲ ಇಲ್ಲಿವರೆಗೆ 5 ಸಾವಿರದವರೆಗೆ ಟೋಲ್ ಹಣ ಕಟ್ ಆಗಿದೆ ಅಂತಿದ್ದಾರೆ ಕಿರಣ್‌ಮೂರ್ತಿ.

Comments are closed.