Renukaswamy Case: ಜೈಲಿನಲ್ಲಿ ದರ್ಶನ್ ಭೇಟಿಗೆ ಹಾತೊರೆದ ಪವಿತ್ರಾ ಗೌಡ; ʼದಾಸʼನಿಗಿಲ್ಲ ಮನಸ್ಸು!

Renukaswamy case: ರೇಣುಕಾಸ್ವಾಮಿ (Renukaswamy Case) ಪ್ರಕರಣದ ಟ್ರಯಲ್ ಪ್ರಕ್ರಿಯೆ ಇತ್ತೀಚೆಗೆ ಆರಂಭಗೊಂಡಿದೆ. ಮೊದಲ ಹಂತವಾಗಿ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಹಾಗೂ ತಾಯಿ ರತ್ನಪ್ರಭಾ ಸಾಕ್ಷಿ ಹೇಳಿದ್ದಾರೆ.

ಇಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡು ಮುಂದಿನ ವಿಚಾರಣೆ ಈ ತಿಂಗಳ 29ಕ್ಕೆ ಮುಂದೂಡಲಾಗಿದೆ. ಟ್ರಯಲ್ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಪ್ರಕರಣ ಎ1 ಪವಿತ್ರಾ ಗೌಡ (Pavithra Gowda) ಅವರಿಗೆ ಢವ ಢವ ಶುರುವಾಗಿದೆ.ಇತ್ತೀಚೆಗೆ ಪವಿತ್ರಾ ಗೌಡ ಅವರು ತನ್ನ ಲಾಯರ್ ಬಾಲನ್ ಮೂಲಕ ಸೆಲ್‌ಗೆ ಟಿವಿ, ಪೇಪರ್, ಮನೆ ಊಟ ಬೇಕೆನ್ನುವ ಮನವಿಯನ್ನು ಮಾಡಿದ್ದಾರೆ. ಪ್ರ
ಕರಣ ಸಂಬಂಧ ಕೇಸ್ ಟ್ರಯಲ್, ಸಾಕ್ಷಿ ವಿಚಾರಣೆ, ಕ್ರಾಸ್ ಎಕ್ಸಾಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆ ಪವಿತ್ರಾ ಗೌಡ ಅವರು ದರ್ಶನ್ ಅವರ ಭೇಟಿಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.ಇತ್ತೀಗೆಷ್ಟೇ ಡಿಜಿಪಿ ಅಲೋಕ್ ಕುಮಾರ್ ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟು ಜೈಲಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪವಿತ್ರಾ ಅವರು ಅಲೋಕ್ ಅವರ ಬಳಿ ದರ್ಶನ್ ಭೇಟಿಗೆ ಅವಕಾಶ ಕೇಳಿದ್ದಾರೆ ಎನ್ನಲಾಗಿದೆ.ಇದಕ್ಕೆ ಅಲೋಕ್ ಕುಮಾರ್ ಅವರು ಬೇಡಿಕೆ ಸಂಬಂಧ ಕಾನೂನಿನಲ್ಲಿ ಅವಕಾಶ ಇದೆಯೋ ಇಲ್ವೋ ಎನ್ನುವ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಇದಲ್ಲದೆ ಪವಿತ್ರಾ ಅವರು ಜೈಲು ಅಧಿಕಾರಿಗಳ ಬಳಿಯೂ ದರ್ಶನ್ ಭೇಟಿಗೆ ಅವಕಾಶ ಕಲ್ಪಿಸಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.ಇನ್ನು ಪವಿತ್ರಾ ಗೌಡ ಅವರ ಭೇಟಿಯ ವಿಚಾರ ದರ್ಶನ್ ಅವರಿಗೆ ಗೊತ್ತಾಗಿದೆ ಎನ್ನಲಾಗುತ್ತಿದ್ದು, ದರ್ಶನ್ ಪವಿತ್ರಾ ಗೌಡ ಅವರನ್ನು ಭೇಟಿ ಆಗಲು ನಿರಾಕರಿಸಿದ್ದಾರೆ ಎನ್ನಲಾಗಿದೆ.ಸದ್ಯ ಕ್ರಾಸ್ ಎಕ್ಸಾಮಿನೇಷನ್ ಡಿಸೆಂಬರ್ 18ಕ್ಕೆ ಮುಕ್ತಾಯವಾಗಿದ್ದು 29/12/2025 ಕ್ಕೆ ವಿಚಾರಣೆ ಮುಂದೂಡಿಕೆಯಾಗಿದೆ.
Comments are closed.