ಶ್ರೀರಾಮ ಹಿಂದೂವಲ್ಲ, ಮುಸ್ಲಿಂ- ಟಿಎಂಸಿ ಶಾಸಕ ಹೇಳಿದ್ದಾಗಿ ಬಿಜೆಪಿ ಆರೋಪ


ಕೋಲ್ಕತಾ: ಶ್ರೀರಾಮ ಹಿಂದೂವಲ್ಲ, ಮುಸ್ಲಿಂ ಎಂದು ಟಿಎಂಸಿ ಶಾಸಕ ಮದನ್ ಮಿತ್ರಾ ಹೇಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಪ್ರಕರಣ ಕುರಿತ ಅರ್ಧ ನಿಮಿಷದ ವೀಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ನಾಯಕ ಪ್ರದೀಪ್ ಭಂಡಾರಿ, ವೋಟ್ ಬ್ಯಾಂಕ್ ಓಲೈಸಲು ಹಿಂದೂ ಧರ್ಮ, ಬಂಗಾಲಿಗರ ಸಂಪ್ರದಾಯಗಳನ್ನು ತೃಣಮೂಲ ಕಾಂಗ್ರೆಸ್ ಅಪಹಾಸ್ಯ ಮಾಡುತ್ತಿದೆ.

ಇದೆಲ್ಲವನ್ನೂ ನೋಡುತ್ತಾ ಮೌನ ಪ್ರದರ್ಶಿಸುವ ಮೂಲಕ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಪಹಾಸ್ಯಗಳಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪದ ಬಗ್ಗೆ ಮದನ್ ಪ್ರತಿಕ್ರಿಯಿಸಿದ್ದು, 2024ರ ಹಳೆಯ ವೀಡಿಯೋದ ಕೆಲವು ಭಾಗಗಳನ್ನು ಎಡಿಟ್ ಮಾಡಿ ಹರಿಬಿಡಲಾಗಿದೆ. ಸಂಪೂರ್ಣ ವೀಡಿಯೋ ಪ್ರಕಟವಾದರೆ, ನಾನ್ಯಾವುದೇ ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ ಎಂದು ತಿಳಿದುಬರುತ್ತದೆ ಎಂದಿದ್ದಾರೆ.

Comments are closed.