Computer Science : ಇಂಜಿನಿಯರಿಂಗ್ ಕೋರ್ಸ್ ಆಕಾಂಕ್ಷಿಗಳಿಗೆ ಬ್ಯಾಡ್ ನ್ಯೂಸ್- ಕಂಪ್ಯೂಟರ್ ಸೈನ್ಸ್ ಸೀಟ್ ಗೆ ಇನ್ನೂ ಲಿಮಿಟೇಶನ್ !!

Computer Science : ಇಂಜಿನಿಯರಿಂಗ್ ಕೋರ್ಸ್ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಬ್ಯಾಡ್ ನ್ಯೂಸ್ ನೀಡಿದ್ದು, ಇನ್ನು ಮುಂದೆ ಕಂಪ್ಯೂಟರ್ ಸೈನ್ಸ್ ಸೀಟ್ ಗಳಿಗೆ ಲಿಮಿಟೇಶನ್ ಹೇರಲು ಮುಂದಾಗಿದೆ.

ಕರ್ನಾಟಕದಲ್ಲಿ ಶೇಕಡಾ 64 ಕ್ಕಿಂತ ಹೆಚ್ಚು ಎಂಜಿನಿಯರಿಂಗ್ ಸೀಟುಗಳು ಕಂಪ್ಯೂಟರ್ ಸೈನ್ಸ್ ಮತ್ತು ಅದಕ್ಕೆ ಸಂಬಂಧಿಸಿದ ವಿಭಾಗಗಳಿಂದ ಬರುತ್ತಿದ್ದಾರೆ. ಹೀಗೆ ಹೆಚ್ಚುವರಿ ಕಂಪ್ಯೂಟರ್ ಸೈನ್ಸ್ ಪದವೀಧರರಿಂದಾಗಿ ನಿರುದ್ಯೋಗ ಉಂಟಾಗಬಹುದು ಎಂದು ನಿರೀಕ್ಷಿಸಿ, ಸೀಟುಗಳ ಸಂಖ್ಯೆಯನ್ನು ಮಿತಿಗೊಳಿಸಲು ಸರ್ಕಾರ ಯೋಜಿಸುತ್ತಿದೆ.
ವಿಧಾನ ಪರಿಷತ್ ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ಈ ಕುರಿತಾಗಿ ಪ್ರಶ್ನೆಯನ್ನು ಕೇಳಿದ್ದರು. ಅಲ್ಲದೆ ಭವಿಷ್ಯದ ಕುರಿತು ಕಳವಳವನ್ನು ಕೂಡ ವ್ಯಕ್ತಪಡಿಸಿದ್ದರು. ಇದಕ್ಕೆ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ .ಸಿ. ಸುಧಾಕರ್ ಅವರು”ಭವಿಷ್ಯದಲ್ಲಿ ನಮಗೆ ದೊಡ್ಡ ಸಮಸ್ಯೆ ಎದುರಾಗಲಿದೆ, ಅದು ಎಂಜಿನಿಯರಿಂಗ್ ಪದವೀಧರರ ನಿರುದ್ಯೋಗ. 1.53 ಲಕ್ಷ ಎಂಜಿನಿಯರಿಂಗ್ ಸೀಟುಗಳಲ್ಲಿ 99,707 ಸೀಟುಗಳು ಕಂಪ್ಯೂಟರ್ ಸೈನ್ಸ್ ಮತ್ತು ಸಂಬಂಧಿತ ವಿಷಯಗಳಲ್ಲಿವೆ. ಕಂಪ್ಯೂಟರ್ ಸೈನ್ಸ್ ಮತ್ತು ಸಂಬಂಧಿತ ಸ್ಟ್ರೀಮ್ಗಳ ಪ್ರವೇಶವನ್ನು ನಿಯಂತ್ರಿಸುವಂತೆ ಕೋರಿ ನಾನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗೆ (ಎಐಸಿಟಿಇ) ಪತ್ರ ಬರೆದಿದ್ದೇನೆ. ಅದು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿತು. ಆದರೆ, ಸರ್ಕಾರವಾಗಿ ನಾವು ಮಾಡಲು ಅನುಮತಿ ನೀಡಲಾಗಿದೆ’ ಎಂದು ಹೇಳಿದರು.
ಅಲ್ಲದೆ ತೆಲಂಗಾಣ ಸರ್ಕಾರ ಈಗಾಗಲೇ ಎಂಜಿನಿಯರಿಂಗ್ ಸೀಟುಗಳನ್ನು ಮಿತಿಗೊಳಿಸಿದೆ. ಕಂಪ್ಯೂಟರ್ ಸೈನ್ಸ್ ಸೇರಿದಂತೆ ಸೀಟುಗಳ ಸಂಖ್ಯೆಯನ್ನು ನಿರ್ಬಂಧಿಸಲು ನಾವು ನಿರ್ಧರಿಸಿದ್ದೇವೆ. ನೆರೆಯ ತೆಲಂಗಾಣದಲ್ಲಿ ಸರ್ಕಾರವು ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿತು ಮತ್ತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಈ ನಿರ್ಧಾರವನ್ನು ಎತ್ತಿಹಿಡಿದಿವೆ. ನಾವು ಸೀಟುಗಳನ್ನು ತರ್ಕಬದ್ಧಗೊಳಿಸುತ್ತೇವೆ ಮತ್ತು ಕೆಲವು ಸ್ಟ್ರೀಮ್ಗಳಿಗೆ ಪ್ರವೇಶವನ್ನು ನಿರ್ಬಂಧಿಸುತ್ತೇವೆ ಎಂದು ಅವರು ಹೇಳಿದರು.
Comments are closed.