Venkatesh Iyer: RCB ಗೆ ಸೆಲೆಕ್ಟ್ ಆದ ಬೆನ್ನಲ್ಲೇ ಹೊಸ ಸಂದೇಶ ರವಾನಿಸಿದ ವೆಂಕಟೇಶ್ ಅಯ್ಯರ್ !!

Share the Article

Venkatesh Iyer: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಮಧ್ಯಪ್ರದೇಶದ ಆಲ್​ರೌಂಡರ್ ವೆಂಕಟೇಶ್ ಅಯ್ಯರ್ (Venkatesh Iyer) ಎಂಟ್ರಿ ಕೊಟ್ಟಿದ್ದಾರೆ. ಅಬುಧಾಬಿಯಲ್ಲಿ ಮಂಗಳವಾರ (ಡಿ.16) ನಡೆದ ಐಪಿಎಲ್ ಮಿನಿ ಹರಾಜಿನ ಮೂಲಕ ಆರ್​ಸಿಬಿ ವೆಂಕಟೇಶ್ ಅವರನ್ನು 7 ಕೋಟಿ ರೂ.ಗೆ ಖರೀದಿಸಿದೆ. ಇದರ ಬೆನ್ನಲ್ಲೇ ಇದೀಗ ವೆಂಕಿ ಅವರು ಹೊಸ ಸಂದೇಶವನ್ನು ರವಾನಿಸಿದ್ದಾರೆ.

ಹೌದು, ಆರ್‌ಸಿಬಿ ಸೇರಿದ ವೆಂಕಟೇಶ್ ಅಯ್ಯರ್ ಪ್ರತಿಕ್ರಿಯೆ ನೀಡಿದ್ದು, ‘ನಮಸ್ಕಾರ ಬೆಂಗಳೂರು, ನಾನು ಆರ್‌ಸಿಬಿ ತಂಡವನ್ನು ಸೇರಿಕೊಳ್ಳಲು ತುಂಬಾ ಉತ್ಸುಕನಾಗಿದ್ದೇನೆ. ಆರ್‌ಸಿಬಿ ತಂಡದ ಭಾಗವಾಗಿರುವುದಕ್ಕೆ ಸಂತಸವಾಗುತ್ತಿದೆ. ತಂಡದ ನಿರ್ವಾಹಕರಿಗೆ ಧನ್ಯವಾದಗಳು’ ಎಂದಿದ್ದಾರೆ.

ಅಲ್ಲದೆ ‘ನನ್ನ ಮೇಲೆ ನಂಬಿಕೆ ಇಟ್ಟು, ನನ್ನನ್ನು ಖರೀದಿಸಿದ ಫ್ರಾಂಚೈಸಿ ಹಾಗೂ ತಂಡದ ಮ್ಯಾನೆಜ್‌ಮೆಂಟ್‌ಗೆ ಧನ್ಯವಾದಗಳು, ಮುಂದಿನ ಸೀಸನ್‌ ಅನ್ನು ಚಾಂಪಿಯನ್ ತಂಡದ ಭಾಗವಾಗಿ ಆಡುವುದಕ್ಕೆ ಬಹಳ ಸಂತೋಷವಾಗುತ್ತಿದೆ, ಪ್ಲೇ ಬೋಲ್ಡ್’ ಎಂದು ತಿಳಿಸಿದ್ದಾರೆ.

Comments are closed.