Egg: ಮೊಟ್ಟೆ ತಿಂದರೆ ಕ್ಯಾನ್ಸರ್ ಬರೋದು ಪಕ್ಕಾನಾ? ಅಚ್ಚರಿ ವಿಚಾರ ಬಿಚ್ಚಿಟ್ಟ ವೈದ್ಯರು, ಆಹಾರ ತಜ್ಞರು

Share the Article

Egg: ದೇಶದಲ್ಲಿ ‘ಮೊಟ್ಟೆ’ ಭಾರಿ ಸದ್ದು ಮಾಡುತ್ತಿದೆ. ಕಾರಣ ಮೊಟ್ಟೆಯಲ್ಲಿ ಕ್ಯಾನ್ಸರ್ಕಾರಕ ಅಂಶ ಪತ್ತೆಯಾಗಿರುವುದು. ಹೌದು.. ಮೊಟ್ಟೆಯಲ್ಲಿ AOZ ಅಂಶ ಇದೆ, ಇದು ಕ್ಯಾನ್ಸರ್  (cancer) ಕಾರಕ ಎನ್ನುವ ಒಂದು ವಿಡಿಯೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ರೆ ಮೊಟ್ಟೆ ತಿಂದರೆ ಕ್ಯಾನ್ಸರ್ ಬರುವುದು ಪಕ್ಕಾನಾ? ಈ ಕುರಿತು ತಜ್ಞರು ಏನು ಹೇಳುತ್ತಾರೆ?

 ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಮೊಟ್ಟೆ ವಿಚಾರವಾಗಿ ಹರಿದಾಡುತ್ತಿರುವ ಕ್ಯಾನ್ಸರ್ ಸುದ್ದಿಯು ಆಹಾರಪ್ರಿಯರ ನಿದ್ದೆಗೆಡಿಸಿದೆ. ಆದರೆ ಇದೀಗ ಬೆಂಗಳೂರಿನ ಪ್ರಸಿದ್ಧ ‌ಕ್ಯಾನ್ಸರ್ ಆಸ್ಪತ್ರೆ ವೈದ್ಯರ ಪ್ರಕಾರ ಮೊಟ್ಟೆ ಸೇಪ್, ಯಾವುದೇ ಆತಂಕ ಬೇಡ. ಮೊಟ್ಟೆ ಸೇವಿಸುವುದರಿಂದ ಯಾವುದೇ ಕ್ಯಾನ್ಸರ್ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ದೇಶಕ ಡಾ.ನವೀನ್ ಮಾತನಾಡಿದ್ದು, ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರುತ್ತೆ ಎನ್ನುವುದು ಸುಳ್ಳು. ಮೊಟ್ಟೆ ಸೇಫ್, ಮೊಟ್ಟೆಯಿಂದ ಕಾಯಿಲೆ ಬರಲ್ಲ. ಅದರಲ್ಲೂ ಕ್ಯಾನ್ಸರ್ ಬರಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ಮೂಲಕ ಜನರ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಅಲ್ಲದೆ ಈ ಹಿಂದೆ ಪೌಲ್ಟ್ರಿಗಳಲ್ಲಿ ಕೋಳಿಗಳಿಗೆ ಆಂಟಿಬಯೋಟಿಕ್ ಯೂಸ್ ಮಾಡಲಾಗುತ್ತಿತ್ತು. ನೈಟ್ರೋಫ್ಯೂರಾನ್ ತುಂಬಾ ಹಿಂದೆ ಬಳಕೆ ಇತ್ತು ಎನ್ನಲಾಗಿತ್ತು. ಯೂರಿನರಿ ಇನ್ಫೆಕ್ಷನ್ ಟ್ರೀಟ್ಮೆಂಟ್ ಗೆ ಇದರ ಬಳಕೆ ಮಾಡಲಾಗುತ್ತಿತ್ತು. ಆದ್ರೆ, ಈಗ ನೈಟ್ರೋಫ್ಯೂರಾನ್ ಬ್ಯಾನ್ ಆಗಿದೆ. ನೈಟ್ರೋಫ್ಯೂರಾನ್ ರೋಗನಿರೋಧಕವಾಗಿ ಬಳಕೆ ಆಗುತ್ತಿಲ್ಲ. ಹೀಗಾಗಿ ಇದರ ಅಪಾಯ ಕಡಿಮೆ ಎಂದು ಕ್ಯಾನ್ಸರ್ ತಜ್ಞ ಡಾ.ನವೀನ್ ಸ್ಪಷ್ಟಪಡಿಸಿದ್ದಾರೆ.

ಆಹಾರ ತಜ್ಞರು ಹೇಳುವುದೇನು?

ಒಂದು ಮೊಟ್ಟೆ ಸ್ಯಾಂಪಲ್ ಟೆಸ್ಟ್ ಗೆ ಒಳಪಡಿಸಿದಾಗ AOZ ಅಂಶ ಪತ್ತೆಯಾಗಿರೋದು ತಿಳಿದಿದೆ. ಆಂಟಿಬಯೋಟಿಕ್ ಅಂಶಗಳು ಮೊಟ್ಟೆಯಲ್ಲಿ ಕಂಡು‌ಬಂದಿದೆ. AOZ ಅಂದ್ರೆ ಆಂಟಿಬಯೋಟಿಕ್ ‌ನಲ್ಲಿ‌ ಇರೋ ಒಂದು ಅಣುಅಂಶ. ಇದು 0.7 ನಿಂದ 1 ವರೆಗೂ ಇರಬಹುದು ಅಂತಿದೆ. ಈಗಿನ ಸ್ಯಾಂಪಲ್ ರಿಪೋರ್ಟ್ ನಲ್ಲಿ 0.7 ಕಂಡುಬಂದಿದೆ. ಆದರೆ AOZ ನಿಂದ ಕ್ಯಾನ್ಸರ್ ಬರುತ್ತೆ ಅಂತ ಎಲ್ಲೂ‌ ಪ್ರೂವ್ ಆಗಿಲ್ಲ. AOZ ಪ್ರಾಣಿಗಳಲ್ಲಿ ಉದಾಹರಣೆಗೆ ಕೋಳಿ, ಮೊಟ್ಟೆ, ಕುರಿಯಲ್ಲಿ ಕಂಡುಬಂದರೆ ಅದು ಕ್ಯಾನ್ಸರ್ ಕಾರಕ ಹೌದು. ಇಂತಹ ಪ್ರಾಣಿಗಳ ಆಹಾರದಿಂದ ಮಾನವನ ದೇಹಕ್ಕೆ ಪರಿಣಾಮ ಉಂಟಾಗುತ್ತದೆ. ಜೀನೋಟಾಕ್ಸಿಸ್ ರಿಲೀಸ್ ಆಗುವ ಅಪಾಯ ಇದೆ ಎಂದು ಹೇಳಿದ್ದಾರೆ.

Comments are closed.