RCB: IPL-2026 ಹರಾಜು- 8 ಆಟಗಾರರನ್ನು ಖರೀದಿಸಿದ RCB

Share the Article

RCB: ಇಂಡಿಯನ್ ಪ್ರೀಮಿಯರ್ ಲೀಗ್​ 2026ರ ಹರಾಜು ದುಬೈನಲ್ಲಿ ನಡೆದಿದೆ. ಈ ಬಾರಿಯ ಹರಾಜು ಪ್ರಕ್ರಿಯೆ ಅತ್ಯಂತ ಆಶ್ಚರ್ಯಕರ ಸಂಗತಿಗಳಿಗೆ ಕಾರಣವಾಗಿದೆ. ಈ ನಡುವೆ ಆರ್‌ಸಿಬಿ ಖರೀದಿಸಿದ ಆಟಗಾರರ ವಿಚಾರ ಮುನ್ನಲೆಗೆ ಬಂದಿದೆ. ಹಾಗಿದ್ರೆ ಆರ್‌ಸಿಬಿ ಖರೀದಿಸಿದ ಆಟಗಾರರು ಯಾರು ಎಂದು ನೋಡೋಣ.

ಐಪಿಎಲ್ ಮಿನಿ ಹರಾಜಿಗೆ (IPL 2026 Auction) ಎಂಟ್ರಿಕೊಟ್ಟಿದ್ದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತನ್ನ ಬಳಗಕ್ಕೆ 8 ಆಟಗಾರರನ್ನು ಖರೀದಿಸುವ ಮೂಲಕ ತಂಡವನ್ನು ಸ್ಟ್ರಾಂಗ್ ಮಾಡಿಕೊಂಡಿದೆ. ಅವಶ್ಯಕವಿರುವ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿರುವ ಆರ್​ಸಿಬಿ 6 ಭಾರತೀಯ ಆಟಗಾರರನ್ನು ಮತ್ತು ಇಬ್ಬರು ವಿದೇಶಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಆರ್​ಸಿಬಿ ಖರೀದಿಸಿದ 8 ಆಟಗಾರರು

ವೆಂಕಟೇಶ್ ಅಯ್ಯರ್- 7 ಕೋಟಿ ರೂ.

ಮಂಗೇಶ್ ಯಾದವ್- 5.2 ಕೋಟಿ ರೂ.

ಜಾಕೋಬ್ ಡಫಿ- 2 ಕೋಟಿ ರೂ.

ಸಾತ್ವಿಕ್ ದೇಸ್ವಾಲ್- 30 ಲಕ್ಷ ರೂ.

ಜೋರ್ಡಾನ್ ಕಾಕ್ಸ್- 75 ಲಕ್ಷ ರೂ.

ವಿಕ್ಕಿ ಒಸ್ತ್ವಾಲ್- 30 ಲಕ್ಷ ರೂ.

ಕಾನಿಷ್ಕ್ ಚೌಹಾಣ್- 30 ಲಕ್ಷ ರೂ.

ವಿಹಾನ್ ಮಲ್ಹೋತ್ರಾ- 30 ಲಕ್ಷ ರೂ.

Comments are closed.