ಉಜಿರೆ: ಮಾಚಾರು ಬಳಿ ಕಾರು-ಬೈಕು ಅಪಘಾತ

ಉಜಿರೆ: ಮಾಚಾರು ಮಸೀದಿ ಸೇತುವೆಯ ಬಳಿ ಕಾರು ಬೈಕು ಅಪಘಾತ ನಡೆದಿದ್ದು ಈ ಘಟನೆಯಲ್ಲಿ ಬೈಕ್ ಸವಾರನಿಗೆ ಗಾಯಗಳಾಗಿದೆ ಎಂದು ವರದಿಯಾಗಿದೆ.

ಈ ಘಟನೆ ಡಿ.15 (ಇಂದು) ರಂದು ಸಂಭವಿಸಿದ್ದು, ಬೈಕ್ ಸವಾರ ಮಾಚಾರಿನಿಂದ ಉಜಿರೆ ಕಡೆಗೆ, ಕಾರು ಉಜಿರೆಯಿಂದ ಬೆಳಾಲು ಕಡೆಗೆ ಹೋಗುವ ಸಂದರ್ಭದಲ್ಲಿ ಚಾಲಕರ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಬೈಕ್ ಸವಾರನಿಗೆ ಗಾಯವಾಗಿದ್ದು, ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
Comments are closed.