ಮಂಗಳೂರು RTO ಕಚೇರಿಗೆ ಬಾಂಬ್‌ ಬೆದರಿಕೆ

Share the Article

ಮಂಗಳೂರು: ಮಂಗಳೂರಿನ ಆರ್‌ಟಿಒ ಕಚೇರಿಗೆ ಇ-ಮೇಲ್‌ ಮೂಲಕ ಬೆದರಿಕೆ ಸಂದೇಶ ರವಾನಿಸಲಾಗಿದೆ. ಮಂಗಳೂರಿನ ನೆಹರು ಮೈದಾನದ ಬಳಿಯ ಆರ್‌ಟಿಒ ಕಚೇರಿಗೆ 5 ಕಡೆ ಬಾಂಬ್‌ ಸ್ಫೋಟ ಮಾಡುವುದಾಗಿ ಮೇಲ್‌ ಬಂದಿದು, ಸದ್ಯಕ್ಕೆ ಆರ್‌ಟಿಒ ಕಚೇರಿಗೆ ಮಂಗಳೂರು ಪೊಲೀಸರು, ಬಾಂಬ್‌ ನಿಷ್ಕ್ರಿಯ ದಳದಿಂದ ಇಡೀ ಕಟ್ಟಡವನ್ನು ತಪಾಸಣೆ ಮಾಡಲಾಗಿದೆ.

ಗದಗ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಕೂಡಾ ಇ ಮೇಲ್‌ ಮೂಲಕ ಡಿಸಿ ಕಚೇರಿಗೆ ಬಾಂಬ್‌ ಬೆದರಿಕೆ ಬಂದಿದೆ. ಪಾಕ್‌ನ ಐಎಸ್‌ಐ ಮತ್ತು ಎಲ್‌ಟಿಟಿಯ ಕಾರ್ಯಕರ್ತರ ಜೊತೆ ಸೇರಿ ಐದು ಬಾಂಬ್‌ ಗಳಿಂದ ಜಿಲ್ಲಾಡಳಿತ ಭವನ ಸ್ಫೋಟ ಮಾಡುವುದಾಗಿ ಧಮ್ಕಿ ಹಾಕಲಾಗಿದೆ. ಶ್ವಾನದಳ, ಬಾಂಬ್‌ ಪತ್ತೆದಳ ಸಿಬ್ಬಂದಿ ಗದಗ ಜಿಲ್ಲಾಡಳಿತ ಭವನ ತಪಾಸಣೆ ಮಾಡಿದ್ದಾರೆ.

ಬೀದರ್‌ ಡಿಸಿ ಕಚೇರಿಗೂ ಬಾಂಬ್‌ ಬೆದರಿಕೆ ಬಂದಿದ್ದು, ಪೊಲೀಸರು ಡಾಗ್‌ ಸ್ಕ್ವಾಡ್‌ನಿಂದ ಪರಿಶೀಲನೆ ಮಾಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಪೊಲೀಸರಿಂದ ಎಲ್ಲಾ ಕಡೆ ತಪಾಸಣೆ ಮಾಡಲಾಗಿದೆ.

Comments are closed.