ಉ.ಪ್ರ.: ಯುಟ್ಯೂಬ್ ನೋಡಿ ರಕ್ತನಾಳ ಕತ್ತರಿಸಿ ಶಸ್ತ್ರಚಿಕಿತ್ಸೆ, ಮಹಿಳೆ ಸಾವು!

Share the Article

ಉತ್ತರಪ್ರದೇಶ: ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಅಕ್ರಮ ಔಷಧಾಲಯದ ಮಾಲಕ ಮತ್ತಾತನ ಸೋದರಳಿಯ ಅಕ್ರಮ ಔಷಧ ಮಾರಿ ನೂರಾರು ಜನರ ಆರೋಗ್ಯಕ್ಕೆ ಕಂಟಕ ಆಗಿದ್ದಲ್ಲದೆ ಇನ್ನೊಂದು ಅಪರಾಧ.ಎಸಗಿದ್ದಾರೆ. ಇಬ್ಬರೂ ಸೇರಿಕೊಂಡು ಯುಟ್ಯೂಬ್ ವೀಡಿಯೋ ನೋಡಿ ಶಸ್ತ್ರಚಿಕಿತ್ಸೆ ಮಾಡಿದ ಘಟನೆ ನಡೆದಿದೆ.

ದರಿಂದಾಗಿ ಇದೀಗ ಮಹಿಳೆ ಮೃತಪಟ್ಟಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಔಷಧಾಲಯಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಹೇಳಿದ ಔಷಧಾಲಯ ನಿರ್ವಾಹಕ ಜ್ಞಾನ್ ಪ್ರಕಾಶ್ ಮಿಶ್ರಾ ಯುಟ್ಯೂಬ್ ನೋಡುತ್ತಾ ಹಲವು ರಕ್ತನಾಳಗಳನ್ನು ಕತ್ತರಿಸಿ ಹಾಕಿದ್ದಾನೆ. ಇದರಿಂದ ಮಹಿಳೆ ಸಾವಿಗೀಡಾಗಿದ್ದಾಳೆ ಎನ್ನಲಾಗಿದೆ.

Comments are closed.