UIDAI: ಇನ್ಮುಂದೆ ಹೋಟೆಲ್, ಓಯೋ ಗಳಿಗೆ ಹೋದ್ರೆ ಆಧಾರ್ ಕೊಡುವ ಅಗತ್ಯವಿಲ್ಲ – UIDAI ಘೋಷಣೆ

Share the Article

UIDAI: ಇಲ್ಲಿಗಾದರೂ ಪ್ರಯಾಣ ಮಾಡುವ ಸಂದರ್ಭದಲ್ಲಿ ಹೋಟೆಲ್ ರೂಮುಗಳಲ್ಲಿ ಕೆಲವರು ಉಳಿದುಕೊಳ್ಳುವುದು ಸಾಮಾನ್ಯ. ಇಂದು ಕೆಲವೊಂದು ವಿಚಾರದಲ್ಲಿ ಓಯೋರು ಕೂಡ ಸುದ್ದಿ ಇದ್ದು ಅಲ್ಲಿಯೂ ಕೂಡ ಬೇರೆ ಬೇರೆ ಕಾರಣಗಳಿಗೆ ಉಳಿದುಕೊಳ್ಳುತ್ತಾರೆ. ಹೀಗೆ ನೀವು ರೂಮಗಳಿಗೆ ಹೋದ ಸಂದರ್ಭದಲ್ಲಿ ಅಲ್ಲಿ ಆಧಾರಕ್ಕಾಗಿ ಆಧಾರ್ ಕಾರ್ಡ್ ಕಾಪಿಯನ್ನು ಕೇಳಿ ಪಡೆಯುತ್ತಾರೆ. ಆದ್ರೆ ಇನ್ನು ಹೋಟೆಲ್‌ಗಳಲ್ಲಿ (OYO ಸೇರಿದಂತೆ) ಚೆಕ್-ಇನ್ ಮಾಡುವಾಗ ಗ್ರಾಹಕರು ಇನ್ನು ಮುಂದೆ ತಮ್ಮ ಆಧಾರ್ ಕಾರ್ಡ್‌ನ ಭೌತಿಕ (ಜೆರಾಕ್ಸ್) ಪ್ರತಿಯನ್ನು ನೀಡುವ ಅಗತ್ಯವಿಲ್ಲ ಎಂದು UIDAI (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಘೋಷಿಸಿದೆ.

ಹೌದು, ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಅವರು ಈ ಕುರಿತು ಪ್ರಮುಖ ಘೋಷಣೆ ಮಾಡಿದ್ದು ‘ನಾಗರಿಕರ ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆ ಸರ್ಕಾರಕ್ಕೆ ಅತ್ಯಂತ ಮಹತ್ವದ್ದಾಗಿದ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಹೊಸ ಅಧಿಸೂಚನೆ ಹೊರಡಿಸಲಾಗುವುದು. ಹೊಸ ನಿಯಮದ ಪ್ರಕಾರ: ಹೋಟೆಲ್‌ಗಳು, ಅತಿಥಿ ಗೃಹಗಳು, ಕಾರ್ಯಕ್ರಮ ಆಯೋಜಕರು ಅಥವಾ ಯಾವುದೇ ಖಾಸಗಿ ಸಂಸ್ಥೆಗಳು ಇನ್ನು ಮುಂದೆ ಗ್ರಾಹಕರಿಂದ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್‌ನ ಭೌತಿಕ ಪ್ರತಿಯನ್ನು ಕೇಳಲು ಸಾಧ್ಯವಿಲ್ಲ. ಆಧಾರ್ ಕಾಯ್ದೆಯ ಅಡಿಯಲ್ಲಿ, ಅನಗತ್ಯವಾಗಿ ಫೋಟೋಕಾಪಿಗಳನ್ನು ಸಂಗ್ರಹಿಸುವುದು ಕಾನೂನಿನ ಉಲ್ಲಂಘನೆಯಾಗಲಿದೆ ಎಂದು ಹೇಳಿದ್ದಾರೆ.

ಹಾಗಿದ್ದರೆ ಆಧಾರ್ ಕಾರ್ಡ್ ಅಥವಾ ದಾಖಲೆ ಪರಿಶೀಲನೆ ಹೇಗೆ ಇಂದು ಯೋಚಿಸುವುದಾದರೆ ಈ ವಿಚಾರವಾಗಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಮಹತ್ವದ ಹೊಸ ನಿಯಮಕ್ಕೆ ಅನುಮೋದನೆ ನೀಡಿದೆ. ಈ ನಿಯಮದ ಪ್ರಕಾರ, ಹೋಟೆಲ್‌ಗಳು ಮತ್ತು ಇವೆಂಟ್ ಆಯೋಜಕರು ಸೇರಿದಂತೆ ಗ್ರಾಹಕರ ಗುರುತನ್ನು ಆಧಾರ್ ಮೂಲಕ ಪರಿಶೀಲಿಸಲು ಬಯಸುವ ಎಲ್ಲಾ ಸಂಸ್ಥೆಗಳು ಕಡ್ಡಾಯವಾಗಿ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕು. ಈ ತಂತ್ರಜ್ಞಾನದ ಮೂಲಕ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ಅಭಿವೃದ್ಧಿಯಲ್ಲಿರುವ ಹೊಸ ಆಧಾರ್ ಆಯಪ್ (Aadhaar App) ನೊಂದಿಗೆ ಸಂಪರ್ಕ ಸಾಧಿಸುವ ಮೂಲಕ ವ್ಯಕ್ತಿಗಳ ಗುರುತನ್ನು ಪರಿಶೀಲಿಸಬಹುದು.

Comments are closed.