Mysuru palace: ಮೈಸೂರು ಅರಮನೆಯ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ!

Mysuru palace: ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ಕೀರ್ತಿಯ ಕಳಶ ಅಂಬಾವಿಲಾಸ ಅರಮನೆಯ (Palace) ಮುಖ್ಯದ್ವಾರದ ಮೇಲಿನ ಭಾಗ ಕುಸಿತಕಂಡಿದ್ದು, ಭಾರಿ ಅನಾಹುತ ತಪ್ಪಿದೆ.ಮೈಸೂರು ಅರಮನೆಯ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತವಾಗಿದ್ದು,ಅರಮನೆಯ ವರಾಹ ಗೇಟ್ ನ ಮುಖ್ಯದ್ವಾರದ ಮೇಲ್ಚಾವಣಿ ಸ್ವಲ್ಪ ಪ್ರಮಾಣದಲ್ಲಿ ಮೇಲ್ಚಾವಣಿ ಕುಸಿತವಾಗಿದೆ.

ಇವತ್ತು ಬೆಳಿಗ್ಗೆ ಘಟನೆ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ. ಸಾರ್ವಜನಿಕರು ಆಗಮಿಸುವ ಗೇಟ್ ಬಳಿಯೇ ಕುಸಿತವಾಗಿದೆ.ಮೇಲ್ಚಾವಣಿ ಕೆಳಗೆ ಸಿಬ್ಬಂದಿ ನಿಲ್ಲಿಸಿದ್ದ ಬೈಕ್ ಮೇಲೆಯೇ ಅವಶೇಷಗಳು ಬಿದ್ದಿದೆ.ಘಟನೆ ಬಳಿಕ ಗೇಟ್ ಬಳಿ ಬ್ಯಾರೀಕೇಡ್ ಗಳನ್ನು ಅಳವಡಿಕೆ ಮಾಡಲಾಗಿದೆ.
ಸ್ವಚ್ಛತಾ ಸಿಬ್ಬಂದಿಯಿಂದ ಬಿದ್ದಿದ್ದ ಮೇಲ್ಚಾವಣಿಯ ಅವಶೇಷಗಳ ತೆರವು ಮಾಡಲಾಗಿದೆ.ಅರಮನೆ ಆಡಳಿತ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನೇಕ ಗೋಡೆಗಳ ಮೇಲೆಯೂ ಬಿರುಕು ಮೂಡಿದ್ದು, ನಿರ್ವಹಣೆ ಕೊರತೆಯಿಂದ ಘಟನೆ ಸಂಭವಿಸಿದ್ಯಾ ಅನ್ನೋ ಅನುಮಾನ ಮೂಡಿದೆ.
Comments are closed.