Mexico: ಅಮೆರಿಕ ಬೆನ್ನಲ್ಲೇ ಭಾರತದ ಆಮದು ಮೇಲೆ 50% ಸುಂಕ ವಿಧಿಸಿದ ಮೆಕ್ಸಿಕೋ!!
Mexico: ಭಾರತದ ಆಮದುಗಳ ಮೇಲೆ ಅಮೆರಿಕವು 50% ಸುಂಕ ವಿಧಿಸಿ ತೆರಿಗೆಯ ಹುಚ್ಚಾಟ ಮೆರೆದಿತ್ತು. ಇದೀಗ ಅಮೆರಿಕ ನಡೆಯನ್ನು ಅನುಸರಿಸಿರುವ ಮೆಕ್ಸಿಕೋ ಭಾರತೀಯ ಆಮದುಗಳ ಮೇಲೆ 50% ಸುಂಕ ವಿಧಿಸಿ ಆದೇಶ ಹೊರಡಿಸಿದೆ.
ಬುಧವಾರ, ಮೆಕ್ಸಿಕೊದ(Mexico) ಸೆನೆಟ್ ಭಾರತ(India), ಚೀನಾ ಮತ್ತು ಇತರ ಹಲವಾರು ಏಷ್ಯಾದ ರಾಷ್ಟ್ರಗಳ ಆಮದುಗಳ ಮೇಲೆ ಶೇ.50ರಷ್ಟು ಸುಂಕವನ್ನು(tariffs) ಹಾಕಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಜನವರಿ 1, 2026 ರಿಂದ ಈ ನಿಯಮ ಜಾರಿಗೆ ಬರಲಿದೆ.
ಸುಂಕ ಹೆಚ್ಚಳವು ಮೆಕ್ಸಿಕೋ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ದೇಶಗಳ ಆಟೋಗಳು, ಆಟೋ ಬಿಡಿಭಾಗಗಳು, ಜವಳಿ, ಪ್ಲಾಸ್ಟಿಕ್ ಮತ್ತು ಉಕ್ಕಿನಂತಹ ಸರಕುಗಳ ಮೇಲೆ 50% ವರೆಗೆ ಸುಂಕವನ್ನು ವಿಧಿಸುತ್ತದೆ. ಇದರರ್ಥ ಭಾರತ, ದಕ್ಷಿಣ ಕೊರಿಯಾ, ಚೀನಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ದೇಶಗಳ ಮೇಲೆ ಇದು ಪರಿಣಾಮ ಬೀರುತ್ತದೆ.
ಅಮೆರಿಕ-ಮೆಕ್ಸಿಕೋ-ಕೆನಡಾ ವ್ಯಾಪಾರ ಒಪ್ಪಂದವನ್ನು ಅಮೆರಿಕ ಪರಿಶೀಲಿಸುವ ಮೊದಲು ಟ್ರಂಪ್ ಅವರನ್ನು ಮೆಚ್ಚಿಸುವ ಸಲುವಾಗಿ ಈ ಕ್ರಮ ಕೈಗೊಂಡಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಇದು ಮುಂದಿನ ವರ್ಷ 3.76 ಬಿಲಿಯನ್ ಡಾಲರ್ (ಸುಮಾರು 33,910 ಕೋಟಿ ರೂ.) ಹೆಚ್ಚುವರಿ ಆದಾಯವನ್ನು ಗಳಿಸುವ ಉದ್ದೇಶವನ್ನು ಹೊಂದಿದೆ.
Comments are closed.