Chitradurga : ಅಂಬೇಡ್ಕರ್ ತಲೆ ಮೇಲೆ ದರ್ಶನ್ ಫೋಟೋ ಕೂರಿಸಿದ ಫ್ಯಾನ್ಸ್!!

Share the Article

Chitradurga : ದರ್ಶನ್ ಅವರ ಅನುಪಸ್ಥಿತಿಯಲ್ಲಿ ಅವರ ಚೊಚ್ಚಲ ಚಿತ್ರ ಡೆವಿಲ್ ರಾಜ್ಯಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಿದೆ. ಚಿತ್ರ ನೋಡಿದ ವೀಕ್ಷಕರು ಡಿ ಬಾಸ್ ಗೆ ಬಹುಪರಾಕ್ ಎನ್ನುತ್ತಿದ್ದಾರೆ. ದರ್ಶನ್ ಅಭಿಮಾನಿಗಳಂತೂ ಊರ ಹಬ್ಬದಂತೆ ಚಿತ್ರ ಬಿಡುಗಡೆಯನ್ನು ಸಂಭ್ರಮಿಸುತಿದ್ದಾರೆ. ಚಿತ್ರಮಂದಿರಗಳಲ್ಲಿ, ನಗರಗಳಲ್ಲಿ ಎಲ್ಲಾ ಕಡೆಯಲ್ಲೂ ಬ್ಯಾನರ್ ಕಟ್ಟಿ ನಟ ದರ್ಶನ್ ಅವರನ್ನು ರಂಜಿಸುತ್ತಿದ್ದಾರೆ. ಹೀಗೆ ಬ್ಯಾನರ್ ಕಟ್ಟುವ ಸಮಯದಲ್ಲಿ ಕೆಲವು ಅಭಿಮಾನಿಗಳು ಎಡವಟ್ಟನ್ನು ಕೂಡ ಮಾಡಿಕೊಂಡಿದ್ದಾರೆ.

ಹೌದು, ದರ್ಶನ್ ಅಭಿಮಾನಿಗಳು ಅತಿಯಾದ ಅಭಿಮಾನವನ್ನು ಪ್ರದರ್ಶಿಸುವ ಭರದಲ್ಲಿ ಮಹಾಪುರುಷರ ಚಿತ್ರಗಳನ್ನು ದುರ್ಬಳಕೆ ಮಾಡಿಕೊಂಡು ವಿವಾದ ಸೃಷ್ಟಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ನಗರದ ವೆಂಕಟೇಶ್ವರ ಚಿತ್ರಮಂದಿರದ ಬಳಿ ನಟ ದರ್ಶನ್ ಅಭಿನಯದ ಮುಂಬರುವ ‘ಡೆವಿಲ್’ ಚಿತ್ರಕ್ಕೆ ಶುಭ ಕೋರುವ ಬೃಹತ್ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಆಶ್ಚರ್ಯವೆಂದರೆ, ಈ ಬ್ಯಾನರ್‌ನಲ್ಲಿ ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಅವರ ಭಾವಚಿತ್ರದ ಜತೆಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರವನ್ನು ಕೂಡ ಅಳವಡಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಅದರಲ್ಲಿಯೂ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಡೆವಿಲ್ ಎಂದು ಹೆಸರಿಟ್ಟು, ಅವರ ಮೇಲೆ ಕೊಲೆ ಆರೋಪಿ ದರ್ಶನ್ ತೂಗುದೀಪ ಫೋಟೋವನ್ನು ನಿಲ್ಲಿಸಿದ್ದಾರೆ.

ಜಿಆರ್ ಹಳ್ಳಿ ಬಾಯ್ಸ್ ಮತ್ತು ದಚ್ಚು ಬಾಯ್ಸ್ ಎಂಬ ಹೆಸರಿನಲ್ಲಿ ಈ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ, ಅದರಲ್ಲೂ ಕೊಲೆ ಆರೋಪಿಯೊಂದಿಗೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಂತಹ ಮಹಾನ್ ನಾಯಕರ ಚಿತ್ರವನ್ನು ಬಳಸಿರುವುದನ್ನು ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.