ಬೆಳಾಲು ಲಕ್ಷ್ಮಣ ಗೌಡ ಸೇರಿ 10 ಜನರಿಗೆ ಯಕ್ಷಸಿರಿ ಪ್ರಶಸ್ತಿ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಬೆಳಾಲ್ ಗ್ರಾಮದ ಲಕ್ಷ್ಮಣಗೌಡರಿಗೆ ಯಕ್ಷಸಿರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜತೆಗೆ, ಕಾಸರಗೋಡಿನ ದಾಸನಡ್ಕ ರಾಮ ಕುಲಾಲ್, ಕುಂದಾಪುರದ ರಾಜೀವ ಶೆಟ್ಟಿ ಹೊಸಂಗಡಿ, ಬೆಳ್ತಂಗಡಿಯ ದಾಸಪ್ಪಗೌಡ. ಗೇರುಕಟ್ಟೆ, ಮಂಗಳೂರಿನ ಶ್ರೀನಿವಾಸ್ ಸಾಲ್ಯಾನ್, ವೇಣೂರಿನ ಸದಾಶಿವ ಕುಲಾಲ್, ಬೆಳ್ಳಾರೆ ಮಂಜುನಾಥ ಭಟ್, ದ.ಕ. ಜಿಲ್ಲೆಯ ಕೇಶವ ಶಕ್ತಿನಗರ, ಲಕ್ಷ್ಮಣಗೌಡ ಬೆಳಾಲ್, ಮೈಸೂರಿನ ಮೂಡಲಪಾಯ ಕಲಾವಿದ ಸಣ್ಣಮಲ್ಲಯ್ಯ, ತುಮಕೂರಿನ ಮೂಡಲಪಾಯ ಕಲಾವಿದ ಎ.ಜಿ.ನಾಗರಾಜು ಸೇರಿ 10 ಮಂದಿಯನ್ನು ಯಕ್ಷಸಿರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ 25,000 ರೂ. ನಗದು ಒಳಗೊಂಡಿದೆ.
ಲಕ್ಷ್ಮಣ ಗೌಡರು 1974ರಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಲಲಿತಕಲಾ ಕೇಂದ್ರದಲ್ಲಿ ಶ್ರೀ ಕಟೀಲು ದುರ್ಗಾ ಪರಮೇಶ್ವರೀ ಮೇಳಕ್ಕೆ ಬಾಲ ಕಲಾವಿದನಾಗಿ ಸೇರ್ಪಡೆಗೊಂಡರು. ಸ್ವಯಂ ಸಾಧನೆಯಿಂದ 3ನೇ ವರ್ಷಕ್ಕೆ ಮುಖ್ಯ ಸ್ತ್ರೀ ಪಾತ್ರಧಾರಿಯಾಗಿ ಪ್ರಗತಿ ಸಾಧಿಸಿದ್ದು, ಮೇರು ಭಾಗವತರಾದ ಬಲಿಪ ನಾರಾಯಣರ ಗರಡಿಯಲ್ಲಿ ಪ್ರಮೀಳೆ, ಶಶಿಪ್ರಭೆ, ದಮಯಂತಿಯಲ್ಲಿ ಶ್ರೀದೇವಿ ಮುಂತಾದ ಸ್ತ್ರೀ ಪಾತ್ರಗಳಲ್ಲಿಯೂ ಶ್ರೀಕೃಷ್ಣ ಶ್ರೀರಾಮ, ಹನುಮಂತ, ಜಯಂತ, ಬಭ್ರುವಾಹನ, ಮನ್ಮಥ, ಶಿವ, ಗಂಡು ವೇಷಗಳಲ್ಲಿಯೂ ಮಿಂಚಿದ್ದಾರೆ.
Comments are closed.