Mohan Bhagavat: ಮೋದಿ ನಂತರ ದೇಶದ ಪ್ರಧಾನಿ ಯಾರು? ಸೂಕ್ಷ್ಮವಾಗಿ ಸುಳಿವು ಕೊಟ್ಟ ಮೋಹನ್ ಭಾಗವತ್

Share the Article

Mohan Bhagavat: ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಯಾರು ಎಂಬ ವಿಚಾರ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ಆರ್ ಎಸ್ ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಮೋದಿ ನಂತರ ಯಾರು ಪ್ರಧಾನಿಯಾಗುತ್ತಾರೆ ಎಂಬ ಕುರಿತು ಸುಳಿವು ಕೊಟ್ಟಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ.

ನರೇಂದ್ರ ಮೋದಿಯವರು ದೇಶ ಕಂಡಂತಹ ಹೆಮ್ಮೆಯ ಪ್ರಧಾನಮಂತ್ರಿಯಾಗಿದ್ದಾರೆ. ಸತತ ತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ದೇಶದ ಸ್ಥಾನನಮಾನವನ್ನು ವಿಶ್ವಮಟ್ಟದಲ್ಲಿ ಎತ್ತರಕ್ಕೆ ಏರಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಪಂಚದ ಪ್ರಭಾವಿ ಪ್ರಧಾನಿಗಳ, ನಾಯಕರ ಪಟ್ಟಿಯಲ್ಲಿ ನರೇಂದ್ರ ಮೋದಿಯವರೇ(Narendra modi) ಮೊದಲಿಗರು. ಅವರ ವರ್ಚಸ್ಸು, ಮಾತು, ಆಡಳಿತ ವೈಖರಿ ಯಾರಿಗೂ ಬರಲಾರದೇನೋ. ಒಟ್ಟಿನಲ್ಲಿ ಸದ್ಯಕ್ಕೆ ಅವರಿಗೆ ಪರ್ಯಾಯವಾಗಿ ಯಾವುದೇ ವ್ಯಕ್ತಿ ಇಲ್ಲ ಎಂದೆನಿಸುತ್ತದೆ. ಆದರೆ ಈ ನಡುವೆ ಮೋದಿ ಬಳಿಕ ದೇಶದ ಪ್ರಧಾನಿ(PM of India after Modi) ಯಾರಾಗುತ್ತಾರೆ ಎಂಬ ವಿಚಾರವೊಂದು ಮುನ್ನಲೆಗೆ ಬಂದಿದೆ. ನರೇಂದ್ರ ಮೋದಿ ನಂತರ ದೇಶದ ಪ್ರಧಾನಿ ಯಾರು? ಈ ಪ್ರಶ್ನೆಯನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಕಾರ್ಯಕ್ರಮವೊಂದರಲ್ಲಿ ಕೇಳಿದಾಗ, ಅವರು ಮುಂಚಿನ ಚಿತ್ರಣವನ್ನು ಸ್ಪಷ್ಟಪಡಿಸಿದ್ದಾರೆ.

ಹೌದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ವರ್ಷಾಚರಣೆಯನ್ನು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಆಯೋಜಿಸಲಾಗಿತ್ತು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಲ್ಲಿ ಅವರಿಗೆ ನರೇಂದ್ರ ಮೋದಿಯ ನಂತರ ಮುಂದಿನ ಪ್ರಧಾನಿ ಯಾರು ಎಂದು ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಭಾಗವತ್ ಅವರು ಸೂಕ್ಷ್ಮವಾಗಿ ಸೂಚನೆಯನ್ನು ನೀಡಿದ್ದಾರೆ.

ಯಸ್, ಈ ಪ್ರಶ್ನೆಗೆ ಉತ್ತರಿಸುತ್ತಾ, ಮೋಹನ್ ಭಾಗವತ್ ಈ ನಿರ್ಧಾರವನ್ನು ಬಿಜೆಪಿ ಮತ್ತು ಮೋದಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಭಾಗವತ್ ಅವರ ಪ್ರತಿಕ್ರಿಯೆಯನ್ನು ಬಿಜೆಪಿಯ ಉತ್ತರಾಧಿಕಾರ ವಿವಾದದಲ್ಲಿ ಭಾಗಿಯಾಗುವ ಉದ್ದೇಶ ಸಂಘಕ್ಕೆ ಇಲ್ಲ ಎಂಬುದರ ಸಂಕೇತವೆಂದು ವ್ಯಾಪಕವಾಗಿ ಅರ್ಥೈಸಲಾಯಿತು. ಅಂದರೆ ಬಿಜೆಪಿ ಮತ್ತು ಮೋದಿ ಈ ವಿಷಯದ ಬಗ್ಗೆ ಚರ್ಚಿಸಿ ನಿರ್ಧರಿಸುತ್ತಾರೆ ಎಂದು ಭಾಗವತ್ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

Comments are closed.