Mantralaya : ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ಹುಟ್ಟಿಕೊಂಡ ಭಾಷಾ ವಿವಾದ- ‘ಕನ್ನಡ’ ಬಳಕೆಗೆ ‘ತೆಲುಗು ಭಾಷಿಕರ’ ವಿರೋಧ!!

Share the Article

Mantralaya : ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಸ್ಥಾನವು ಆಂಧ್ರಪ್ರದೇಶದಲ್ಲಿದ್ದರೂ ಕೂಡ ಅಲ್ಲಿಗೆ ಹೆಚ್ಚಾಗಿ ಹೋಗುವವರು ಕರ್ನಾಟಕದ ಭಕ್ತರು. ಅದರಲ್ಲೂ ರಾಘವೇಂದ್ರ ಸ್ವಾಮಿ ಎಂದರೆ ಕನ್ನಡಿಗರಿಗೆ ಬಲು ಪ್ರೀತಿ ಅದರಲ್ಲೂ ರಾಘವೇಂದ್ರ ಸ್ವಾಮಿ ಎಂದರೆ ಕನ್ನಡಿಗರಿಗೆ ಬಲು ಪ್ರೀತಿ, ಹಾಗೂ ಭಯ, ಭಕ್ತಿ. ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕಾರಣ ಮಂತ್ರಾಲಯದಲ್ಲಿ ಕನ್ನಡ ಬಳಕೆ ಹೆಚ್ಚಾಗಿ ಚಾಲ್ತಿಯಲ್ಲಿದೆ. ಆದರೆ ಇದೀಗ ಮಂತ್ರಾಲಯದಲ್ಲಿ ಹೆಚ್ಚು ಕನ್ನಡ ಬಳಕೆಯಾಗುತ್ತಿರುವುದಕ್ಕೆ ತೆಲುಗು ಭಾಷಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಹೌದು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಮಂತ್ರಾಲಯ ದೇವಾಲದಯ ವಿಚಾರದಲ್ಲಿ ಇದೀಗ ಭಾಷಾ ವಿವಾದ ಸೃಷ್ಟಿಯಾಗಿದೆ ‘ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ” ಎನ್ನುವ ವಿಶೇಷ ಸಾಲುಗಳ ಬಗ್ಗೆ ಆಂಧ್ರಪ್ರದೇಶದ ತೆಲುಗು ಭಾಷಿಕರು ಅನಗತ್ಯ ವಿವಾದವನ್ನು ಸೃಷ್ಟಿ ಮಾಡುತ್ತಿದ್ದಾರೆ. ಇದನ್ನು ತೆಲುಗು ಭಾಷಿಕರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸೃಷ್ಟಿ ಮಾಡಿದ್ದು, ಇದಕ್ಕೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ.

Andhra & Amaravati Updates ಎನ್ನುವ ಸೋಷಿಯಲ್ ಮೀಡಿಯಾ ಖಾತೆಯಿಂದ ಮಂತ್ರಾಲಯ, ಆಂಧ್ರಪ್ರದೇಶ .. ಮಾನ್ಯ ಮುಖ್ಯಮಂತ್ರಿಗಳೇ, ಮಾನ್ಯ ಉಪಮುಖ್ಯಮಂತ್ರಿಗಳೇ, ತೆಲುಗು ಮಂಡಳಿ ಎಲ್ಲಿದೆ ಸರ್? ಮಂತ್ರಾಲಯ ಆಂಧ್ರಪ್ರದೇಶದ ಒಂದು ಭಾಗ, ಅಲ್ಲಿ ತೆಲುಗು ಭಾಷೆಯನ್ನು ಸಂಪೂರ್ಣವಾಗಿ ಹೇಗೆ ತ್ಯಜಿಸಬಹುದು? ಮೊದಲು, ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಕನ್ನಡದಲ್ಲಿ ಬರೆದಿರುವ “ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ” ಎನ್ನುವ ಬರಹವಿರುವ ಫೋಟೋವನ್ನು ಪೋಸ್ಟ್‌ ಮಾಡಿ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಹಲವು ತೆಲುಗು ಭಾಷಿಕರು ಸಹಮತ ವ್ಯಕ್ತಪಡಿಸಿ ಟ್ಯಾಗ್ ಮಾಡುತ್ತಿದ್ದು, ಇದೀಗ ಈ ಪೋಸ್ಟ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Comments are closed.