Tirupati: ತಿರುಪತಿಯಲ್ಲಿ ಮತ್ತೊಂದು ಅತಿದೊಡ್ಡ ಹಗರಣ ಬಯಲು

Share the Article

Tirupati: ತಿರುಪತಿ (Tirupati) ದೇವಸ್ಥಾನದಲ್ಲಿ ನಕಲಿ ತುಪ್ಪ, ಹುಂಡಿ ಕಳ್ಳತನ ಪ್ರಕರಣದ ಬಳಿಕ ಮತ್ತೊಂದು ಹಗರಣ (Scam) ಸದ್ದು ಮಾಡ್ತಿದ್ದು, ಇದು ತಿಮ್ಮಪ್ಪನ ಭಕ್ತರನ್ನು ಕಂಗಾಲಾಗಿಸಿದೆ.

ತಿರುಪತಿಯಲ್ಲಿನ ಹಗರಣಗಳು ಮೇಲಿಂದ ಮೇಲೆ ಬಯಲಾಗುತ್ತಲೇ ಇವೆ. ಲಡ್ಡುವಿಗೆ ಬಳಸಿದ ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ, ದೇಣಿಗೆ ಕಳ್ಳತನ ಮಾಡಿದ ಪ್ರಕರಣ ಈ ಘಟನೆಗಳು ಭಕ್ತರನ್ನು ಕಂಗಾಲಾಗಿಸಿವೆ. ಇದ್ರ ಬೆನ್ನಲ್ಲೇ ಮತ್ತೊಂದು ಹಗರಣ ಬಯಲಾಗಿದೆ. ಫೇಕ್​ ಸ್ಕಿಲ್​ ದುಪ್ಪಟ್ಟ ಸ್ಕ್ಯಾಮ್​​ ಹೊರಬಿದ್ದಿದೆ.

ತಿಮ್ಮಪ್ಪನ ಸನ್ನಿಧಿಯಲ್ಲಿ 2015 ರಿಂದ 2025ರ ಅವಧಿಯಲ್ಲಿ ರೇಷ್ಮೆ ದುಪ್ಪಟ್ಟಗಳ ಖರೀದಿಯಲ್ಲಿ ಬಹುದೊಡ್ಡ ಹಗರಣ ನಡೆದಿದೆ. ಬರೋಬ್ಬರಿ 54 ಕೋಟಿ ಅವ್ಯವಹಾರ ನಡೆದಿರೋದು ತನಿಖೆಯಲ್ಲಿ ಗೊತ್ತಾಗಿದೆ. ದೇವರ ಬಟ್ಟೆ ಖರೀದಿ ಹೆಸರಲ್ಲೂ ಟೋಪಿ ಹಾಕಲಾಗಿದೆ. ನಕಲಿ ರೇಷ್ಮೆ ದುಪ್ಪಟ್ಟಾಗಳನ್ನು ಪೂರೈಸಿ ಗೋಲ್ಮಾಲ್ ಮಾಡಲಾಗಿದೆ. 100 ಪರ್ಸೆಂಟ್ ಪಾಲಿಸ್ಟರ್ ಸಿಲ್ಕ್​ ಎಂದು ಬಿಲ್​ನಲ್ಲಿ ನಮೂದಿಸಿ ನಕಲಿ ರೇಷ್ಮೆ ದುಪ್ಪಟ್ಟಗಳನ್ನು ದೇಗುಲಕ್ಕೆ ಪೂರೈಕೆ ಮಾಡಲಾಗಿದೆ.10 ವರ್ಷಗಳಿಂದ ನಡೆಯುತ್ತಿದ್ದ ರೇಷ್ಮೆ ವಂಚನೆ ಜಾಲವನ್ನು ಟಿಟಿಡಿ ಬಯಲಿಗೆಳೆದಿದೆ. ಪೂರೈಕೆದಾರರೊಬ್ಬರು ಸುಮಾರು ಒಂದು ದಶಕದಿಂದ ಪಾಲಿಸ್ಟರ್ ದುಪ್ಪಟ್ಟಾಗಳನ್ನು ವಿತರಿಸಿ ವಂಚಿಸಿದ್ದಾರೆ. ಇದರಿಂದಾಗಿ ಕೋಟಿ ಕೋಟಿ ನಷ್ಟವಾಗಿದೆಂದು ಆರೋಪಿಸಲಾಗಿದೆ.ಸುಮಾರು 15 ಸಾವಿರ ದುಪ್ಪಟ್ಟಗಳ ಖರೀದಿಯಲ್ಲಿ ಹಗರಣವಾಗಿದೆ ಎನ್ನಲಾಗಿದೆ. ಒಂದು ದುಪ್ಪಟ್ಟಕ್ಕೆ 1389 ರೂಪಾಯಿಂತೆ ಖರೀದಿ ಮಾಡಲಾಗಿದೆ. ಎಲ್ಲಾ ದುಪ್ಪಟ್ಟಾಗಳನ್ನು ರೇಷ್ಮೆಯಿಂದ ಮಾಡಿರೋದು ಎಂದು ಖರೀದಿಸಿದ್ದಾರೆ. ಅನುಮಾನಗೊಂಡು ದುಪ್ಪಟ್ಟಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

ಸೆಂಟ್ರಲ್ ಸಿಲ್ಕ್​ ಬೊರ್ಟ್​ ಹಾಗೂ ಎರಡು ಲ್ಯಾಬೊರೇಟರೀಸ್​ಗಳಿಂದ ಬಂದಿರುವ ವರದಿಯಲ್ಲಿ ಅದು ನಕಲಿ ಸಿಲ್ಕ್ ಅನ್ನೋದು ಸಾಬೀತಾಗಿದೆ. ಈ ಪ್ರಕರಣವನ್ನು ಪೂರ್ಣ ತನಿಖೆಗಾಗಿ ಆಂಧ್ರಪ್ರದೇಶ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಔಪಚಾರಿಕವಾಗಿ ಹಸ್ತಾಂತರಿಸಲಾಗಿದೆ.

ತನಿಖೆಗೆ ಆದೇಶ ನೀಡಿದ್ದ ಟಿಟಿಡಿ ಬೋರ್ಡ್ ಅಧ್ಯಕ್ಷತಿರುಮಲ ಶ್ರೀವಾರಿಗೆ ವಿರಾಳಗಳನ್ನು ಸಮರ್ಪಿಸುವ ಭಕ್ತರು ಮತ್ತು ವಿಐಪಿ ಬ್ರೇಕ್ ದರ್ಶನ ಟಿಕೆಟ್‌ಗಳನ್ನು ಖರೀದಿಸಿದವರಿಗೆ ರಂಗನಾಯಕುಲ ಕಲ್ಯಾಣ ಮಂಡಪದಲ್ಲಿ ವೇದ ಪಂಡಿತರು ವೇದಾಶೀರ್ವಚನ ನೀಡುತ್ತಾರೆ. ಈ ಸಂದರ್ಭದಲ್ಲಿ ಟಿಟಿಡಿ ವತಿಯಿಂದ ರೇಷ್ಮೆ ಶಾಲುಗಳನ್ನು ಭಕ್ತರಿಗೆ ನೀಡಲಾಗುತ್ತದೆ. ಇದಕ್ಕಾಗಿ ಟಿಟಿಡಿ ಪ್ರತಿ ಬಾರಿ ಕೆಲವು ಕೋಟಿ ರೂಪಾಯಿ ಮೌಲ್ಯದ ರೇಷ್ಮೆ ಶಾಲುಗಳನ್ನು ಖರೀದಿಸುತ್ತದೆ.ಈ ರೇಷ್ಮೆ ಶಾಲುಗಳ ಟೆಂಡರ್ ನೋಟಿಫಿಕೇಷನ್‌ನಲ್ಲಿ ತಿಳಿಸಿರುವ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿವೆಯೇ ಇಲ್ಲವೇ ಎಂಬ ಬಗ್ಗೆ ಟಿಟಿಡಿ ಬೋರ್ಡ್ ಅಧ್ಯಕ್ಷ ಬಿ.ಆರ್. ನಾಯ್ಡು ಇತ್ತೀಚೆಗೆ ವಿಜಿಲೆನ್ಸ್ ತನಿಖೆಗೆ ಆದೇಶ ನೀಡಿದ್ದರು. ಇದರೊಂದಿಗೆ ರೇಷ್ಮೆ ಶಾಲು ಹಗರಣ ಬೆಳಕಿಗೆ ಬಂದಿದೆ. ಇನ್ನು, ತಿರುಮಲಕ್ಕೆ ರೇಷ್ಮೆ ಶಾಲು ಪೂರೈಕೆ ಮಾಡುವ ಟೆಂಡರ್ ಅನ್ನು ವಿಆರ್​​ಎಸ್​ ಎಕ್ಸ್ ಪೋರ್ಟ್ ನಗರಿ ಎಂಬ ಸಂಸ್ಥೆ ಪಡೆದುಕೊಂಡಿದ್ದು, ಹಲವು ವರ್ಷಗಳಿಂದ ಇದೇ ಸಂಸ್ಥೆ ಶಾಲುಗಳನ್ನು ಪೂರೈಕೆ ಮಾಡುತ್ತಿದೆ.

Comments are closed.