ಪುತ್ತೂರು ಲಕ್ಷಾಂತರ ರೂ ಮೌಲ್ಯದ ಕಾಫಿ ಬೀಜಗಳ ಕಳವು: ನಾಲ್ವರು ವಶಕ್ಕೆ

ಪುತ್ತೂರು: ನೆಹರು ನಗರದಲ್ಲಿ ನಿಲ್ಲಿಸಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪುತ್ತೂರು ಕಬಕ ಗ್ರಾಮದ ಪೆರ್ನಾಜೆಯ ಅಶ್ಲೇಷ ಭಟ್, ರಿಕ್ಷಾ ಚಾಲಕರಾದ ನಾರಾಯಣ್ ಶೆಟ್ಟಿಗಾರ್, ಮಿಥುನ್ ಕುಮಾರ್ ಮತ್ತು ಸಹಾಯಕ ಸುಳ್ಯದ ಅಶ್ರಫ್ ಎನ್ನುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
80ಗೋಣಿ ಕಾಫಿ ಬೀಜವನ್ನು ಲಾರಿಯಿಂದ ಕದಿಯಲಾಗಿದ್ದು, ಈ ಕೃತ್ಯಕ್ಕೆ ಬಳಕೆ ಮಾಡಿದ ಸ್ವಿಫ್ಟ್ ಕಾರು, ಎರಡು ಆಟೋ ರಿಕ್ಷಾಗಳನ್ನು ಪೊಲೀಸರು ಆರೋಪಿಗಳಿಂದ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
Comments are closed.