Kerala: ಕೇರಳದ ಕೊಲ್ಲಂನಲ್ಲಿ ಭಾರಿ ಬೆಂಕಿ ಅವಘಡ, 10 ಮೀನುಗಾರಿಕಾ ದೋಣಿಗಳು ಭಸ್ಮ

Share the Article

Kerala: ಕೇರಳದ ಕೊಲ್ಲಂನಲ್ಲಿ ಅಷ್ಟಮುಡಿ ಸರೋವರದಲ್ಲಿ ಲಂಗರು ಹಾಕಿದ್ದ ಸುಮಾರು 10 ಮೀನುಗಾರಿಕಾ ದೋಣಿಗಳು ಇಂದು ಮುಂಜಾನೆ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಸುಟ್ಟು ಭಸ್ಮ ಆಗಿದೆ.

ಅಂಚಲುಮೂಡ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯ ಕುರೀಪುಳ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿಯ ಮೊದಲು ಬೆಂಕಿ ಕಾಣಿಸಿಕೊಂಡಿದ್ದು ನಂತರ ಲಂಗರು ಹಾಕಿದ್ದ ದೋಣಿಗಳಿಗೆ ಬೆಂಕಿ ಆವರಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಹೆಚ್ಚಿನ ಅನಾಹುತ ನಡೆಯದಂತೆ ಕ್ರಮ ಕೈಗೊಂಡಿದ್ದಾರೆ.ಪ್ರಾಥಮಿಕ ಅಂದಾಜಿನ ಪ್ರಕಾರ, ಸುಮಾರು 10 ದೋಣಿಗಳು ಸಂಪೂರ್ಣವಾಗಿ ನಾಶವಾಗಿವೆ. ಘಟನೆಗೆ ನಿಖರವಾದ ಕಾರಣ ಇನ್ನೂ ಗುರುತಿಸಲಾಗಿಲ್ಲ, ಆದರೆ ಗ್ಯಾಸ್‌‍ ಸಿಲಿಂಡರ್‌ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿರುವ ಶಂಕೆ ಇದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಹೇಳಿದರು.

Comments are closed.